Advertisement

ದಿಲ್‌ ಪಸಂದ್‌ ಪ್ರೀ-ರಿಲೀಸ್‌ ರಂಗು

01:42 PM Nov 09, 2022 | Team Udayavani |

ನಟ ಡಾರ್ಲಿಂಗ್‌ ಕೃಷ್ಣ ನಾಯಕನಾಗಿ, ನಿಶ್ವಿ‌ಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿರುವ “ದಿಲ್‌ ಪಸಂದ್‌’ ಸಿನಿಮಾ ಇದೇ ನ. 11ಕ್ಕೆ ತೆರೆಗೆ ಬರುತ್ತಿದೆ.

Advertisement

ಸದ್ಯ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ “ದಿಲ್‌ ಪಸಂದ್‌’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು.

ನಟ ಅಜೇಯ್‌ ರಾವ್‌, ತಬಲನಾಣಿ, ನಟಿಯರಾದ ಅದಿತಿ ಪ್ರಭುದೇವ, ರಚನಾ ಇಂದರ್‌, ಸಾಹಿತಿ ಕವಿರಾಜ್‌, ನಿರ್ದೇಶಕ ಬಹದ್ದೂರ್‌ ಚೇತನ್‌, “ಆನಂದ್‌ ಆಡಿಯೋ’ದ ಶ್ಯಾಮ್‌, ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು “ದಿಲ್‌ ಪಸಂದ್‌’ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು.

ಈ ಹಿಂದೆ “ಧೈರ್ಯಂ’, “ಮಳೆ’ ಸಿನಿಮಾಗಳನ್ನು ನಿರ್ದೇಶಿಸಿರುವ ಶಿವ ತೇಜಸ್‌ “ದಿಲ್‌ ಪಸಂದ್‌’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

“ಈಗಾಗಲೇ ಬಿಡುಗಡೆಯಾಗಿರುವ “ದಿಲ್‌ ಪಸಂದ್‌’ ಸಿನಿಮಾದ ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಸಿನಿಮಾ ಕೂಡ ಅದೇ ರೀತಿ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಇದೇ ನ. 11 ರಂದು ಚಿತ್ರ ತೆರೆಗೆ ಬರುತ್ತಿದೆ. ಇಡೀ ಫ್ಯಾಮಿಲಿ ಕೂತು ನೋಡಬಹುದಾದ ನಮ್ಮ ಸಿನಿಮಾ “ದಿಲ್‌ ಪಸಂದ್‌’ನಷ್ಟೇ ಸಿಹಿಯಾಗಿದೆ. ಚಿತ್ರ ದಲ್ಲಿ ಲವ್‌ ಸ್ಟೋರಿ ಜೊತೆಗೆ ತಂದೆ-ಮಗನ ಸೆಂಟಿಮೆಂಟ್‌, ಕಾಮಿಡಿಯೂ ಇದೆ. ಸಂಪೂರ್ಣ ಮನರಂಜನೆ ಸಿನಿಮಾದಲ್ಲಿದೆ’ ಎಂಬುದು ನಿರ್ದೇಶಕ ಶಿವ ತೇಜಸ್‌ ಮಾತು.

Advertisement

“ರಶ್ಮಿ ಫಿಲಂಸ್‌’ ಬ್ಯಾನರ್‌ನಡಿ ಸುಮನ್‌ ಕ್ರಾಂತಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next