Advertisement

‘ದಿಲ್‌ ಪಸಂದ್‌’ಟ್ರೇಲರ್‌ ನೋಡಿ ಪ್ರೇಕ್ಷಕನ ದಿಲ್‌ ಖುಷ್‌

03:34 PM Nov 04, 2022 | Team Udayavani |

ಡಾರ್ಲಿಂಗ್‌ ಕೃಷ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ “ದಿಲ್‌ ಪಸಂದ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು , ಟ್ರೇಲರ್‌ ಮೂಲಕ ಸಿನಿ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ ಚಿತ್ರ.

Advertisement

“ದಿಲ್‌ಪಸಂದ್‌’ ಒಂದು ಕಂಪ್ಲೀಟ್‌ ಫ್ಯಾಮಿಲಿ ಡ್ರಾಮಾ ಚಿತ್ರ ಎಂಬುದು ಟ್ರೇಲರ್‌ ಮೂಲಕ ಹೇಳಲಾಗಿದೆ. ಡಾರ್ಲಿಂಗ್‌ ಕೃಷ್ಣ ಆ್ಯಕ್ಟಿಂಗ್‌ ಕೆರಿಯರ್‌ನಲ್ಲಿ “ದಿಲ್‌ಪಸಂದ್‌’ ವಿಭಿನ್ನ ಚಿತ್ರವಾಗುವ ನಿರೀಕ್ಷೆ ಕೂಡಾ ಅವರಿಗಿದೆ. ಚಿತ್ರದಲ್ಲಿ

ನಾಯಕ ಕೃಷ್ಣನಿಗೆ ನಾಯಕಿಯರಾಗಿ ಮೇಘಾ ಶೆಟ್ಟಿ ಹಾಗೂ ನಿಶ್ವಿ‌ಕಾ ನಾಯ್ಡು ಅಭಿನಯಿಸಿದ್ದು, ನಾಯಕಿಯರು ಸಖತ್‌ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನೋಡು ನೋಡುತ್ತಿದ್ದಂತೆ ಕ್ರೇನ್‌ ಹರಿದು ಬಿ.ಕಾಂ.ವಿದ್ಯಾರ್ಥಿನಿ ಸಾವು!

ಇನ್ನು ಚಿತ್ರದಲ್ಲಿ ತಂದೆ ಸೆಂಟಿಮೆಂಟ್‌ ನ ದೃಶ್ಯಗಳು, ರಗಡ್‌ ಫೈಟಿಂಗ್‌ ಕೂಡಾ ಇದ್ದು, ಕಾಮಿಡಿಗೂ ಜಾಗ ನೀಡಲಾಗಿದೆ. ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಸಾರಥ್ಯದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳು ಈಗಾಗಲೇ ಹಿಟ್‌ ಲೀಸ್ಟ್‌ ಸೇರಿದ್ದು, ಚಿತ್ರದ ಟ್ರೇಲರ್‌ ಕೂಡಾ ಎಲ್ಲೆಡೇ ಸದ್ದು ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

“ರಶ್ಮಿ ಫಿಲಮ್ಸ್‌ ‘ ಬ್ಯಾನರ್‌ ಅಡಿಯಲ್ಲಿ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡಿರುವ, ಶಿವ ತೇಜಸ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ಇದೇ ನವೆಂಬರ್‌ 11 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ರೆಡಿಯಾಗಿದ್ದು, ಅಭಿಮಾನಿಗಳು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next