Advertisement

Digitalization: ಶಿರಸಿಯಲ್ಲಿ ಭೂ ದಾಖಲೆಗಳ ಡಿಜಟಲೀಕರಣಕ್ಕೆ ಚಾಲನೆ

11:33 AM Feb 05, 2024 | sudhir |

ಶಿರಸಿ: ತಾಲೂಕಿನ ಭೂ ದಾಖಲೆಗಳ ಡಿಜಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಗೆ ನಗರದ ಮಿನಿ ವಿಧಾನ ಸೌಧದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

Advertisement

ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿ, ಆ ಕಾಲದಲ್ಲಿ ಮಾಡಲಾದ ಭು ದಾಖಲೆಗಳು ಶಾಶ್ವತವಾಗಿ ಉಳಿಯಬೇಕು, ತಕ್ಷಣ ಸಿಗಬೇಕು, ತಿದ್ದುಪಡಿ ಮಾಡಲು ಅವಕಾಶ ಇರಬಾರದು‌ ಎಂದು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ತಾಲೂಕಿನಲ್ಲಿ ಸುಮಾರು 3.31 ಲ ದಾಖಲೆಗಳು 100 ದಿನದಲ್ಲಿ ಸ್ಕಾನಿಂಗ್ ಆಗಲಿದೆ. ರಾಜ್ಯದ 31 ಜಿಲ್ಲೆಯ ‌31 ತಾಲೂಕುಗಳಲ್ಲಿ ಅನುಷ್ಠಾನ ಆಗಲಿದೆ. ಶಿರಸಿ ಪ್ರಥಮ ಹಂತದಲ್ಲಿ ಅನುಷ್ಠಾನಕ್ಕೆ ಮುಂದಾಗಿದೆ ಎಂದರು.

ರಾಜ್ಯ ಸರಕಾರದ ಈ ವಿಶಿಷ್ಟ ಯೋಜನೆ ಜಾರಿಗೆ ತಂದಿದ್ದು 14 ಲ.ರೂ. ಹಣ ನೀಡಲಿದೆ. 10 ಕಂಪ್ಯೂಟರ್ ಮೂಲಕ 10 ಡಾಟಾ ಆಪರೇಟ್ ರಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ಹೇಳಿದರು.

ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ಗ್ರೇಟ್ ೨ ತಹಸೀಲ್ದಾರ ಡಿ.ಆರ್.ಬೆಳ್ಳಿಮನೆ, ರಮೇಶ ಹೆಗಡೆ ಇತರರು‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next