Advertisement

ಡಿಜಿಟಲ್‌ ವಹಿವಾಟು ಶೇ. 53 ಏರಿಕೆ

02:00 AM Dec 07, 2021 | Team Udayavani |

ಹೊಸದಿಲ್ಲಿ: ಎರಡು ವರ್ಷಗಳಲ್ಲಿ ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ನಿಂದಾದ ಹಿನ್ನಡೆಯ ನಡುವೆಯೂ ಭಾರತದಲ್ಲಿ ಕಳೆದ 12 ತಿಂಗಳಲ್ಲಿ ಆರ್‌ಟಿಜಿಎಸ್‌, ಡಿಜಿಟಲ್‌ ಪೇಮೆಂಟ್‌ ಸೇರಿದಂತೆ ಆನ್‌ಲೈನ್‌ ಪಾವತಿಯ ಪ್ರಮಾಣ ಮತ್ತು ಮೊತ್ತದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

Advertisement

ಈ ಅವಧಿಯಲ್ಲಿ ಪ್ರತಿದಿನ ಏನಿಲ್ಲವೆಂದರೂ 21.79 ಕೋಟಿ ವಹಿವಾಟುಗಳು ನಡೆದಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) “ಪೇಮೆಂಟ್‌ ಮತ್ತು ಸೆಟಲ್‌ಮೆಂಟ್‌ ಸಿಸ್ಟಮ್ಸ್‌’ನ ಚೀಫ್ ಜನರಲ್‌ ಮ್ಯಾನೇಜರ್‌ ಪಿ. ವಾಸುದೇವನ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಬರೋಬ್ಬರಿ 11 ಹಾವು ಬಾಯಲ್ಲಿ ಹಿಡಿದ ಅಮೆರಿಕ ಜಾಕಿ ಬಿಬ್ಬಿ !

ಭಾರತೀಯ ಪಾವತಿ ಮಂಡಳಿ ಆಯೋಜಿಸಿದ್ದ ಡಿಜಿಟಲ್‌ ಹಣ ಸಮ್ಮೇಳನ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 12 ತಿಂಗಳ ಅವಧಿಯಲ್ಲಿ ಆನ್‌ಲೈನ್‌ ಪಾವತಿ ವಹಿವಾಟಿನ ಪ್ರಮಾಣ ಶೇ.53ರಷ್ಟು ಹೆಚ್ಚಳವಾದರೆ, ಈ ವಹಿವಾಟಿನ ಮೊತ್ತವು ಶೇ.28ರಷ್ಟು ಏರಿಕೆಯಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಈಗ ನಾವು ಪ್ರತಿನಿತ್ಯ 21.79 ಕೋಟಿ ಪಾವತಿ ವಹಿವಾಟುಗಳನ್ನು ಪ್ರೊಸೆಸ್‌ ಮಾಡುತ್ತೇವೆ ಎಂದೂ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next