Advertisement

ಹಳ್ಳಿ ಜನರಿಂದ ಡಿಜಿಟಲ್‌ ಪಾವತಿ ಕ್ರಾಂತಿ

12:13 AM Aug 03, 2023 | Team Udayavani |

ದಾವಣಗೆರೆ: ರಾಜ್ಯದ ಗ್ರಾಪಂಗಳಲ್ಲಿ ತೆರಿಗೆ ಹಾಗೂ ಸೇವಾ ಶುಲ್ಕ ಸಂಗ್ರಹ ಡಿಜಿಟಲೀಕರಣ ಆಗಿರುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 4 ತಿಂಗಳಲ್ಲಿ ಡಿಜಿಟಲ್‌ ರೂಪದಲ್ಲಿ 46.46 ಕೋಟಿ ರೂ. ಪಾವತಿಯಾಗಿದೆ.

Advertisement

ಗ್ರಾ.ಪಂ.ಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಪಾವತಿ ಉತ್ತೇಜಿಸಲು ತೆರಿಗೆ, ದರ ಮತ್ತು ಇತರ ಶುಲ್ಕಗಳನ್ನು ವಸೂಲಾತಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ರಾಜ್ಯದ ಆಯ್ದ 5,016 ಗ್ರಾಪಂಗಳಿಗೆ ಆ್ಯಕ್ಸಿಸ್‌ ಬ್ಯಾಂಕ್‌ನಿಂದ ಒಂದೊಂದು ಆ್ಯಂಡ್ರಾಯ್ಡ ಪಿಒಎಸ್‌ ಯಂತ್ರಗಳನ್ನು ಒದಗಿಸಿದೆ.

ಬಿಲ್‌ ಕಲೆಕ್ಟರ್‌ಗಳು ಮನೆ ಮನೆಗೆ ಭೇಟಿ ನೀಡಿ ತೆರಿಗೆ ವಸೂಲು ಮಾಡುತ್ತಿದ್ದಾರೆ. ಗ್ರಾ.ಪಂ. ಕಚೇರಿಗಳಲ್ಲಿಯೂ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಡೆಯಲು ಆ್ಯಂಡ್ರಾಯ್ಡ ಪಿಒಎಸ್‌ ಯಂತ್ರಗಳನ್ನು ಬಳಸಲಾಗುತ್ತಿದೆ.

ಜಿಲ್ಲೆಯಲ್ಲಿ ಮೊದಲು ದಾವಣಗೆರೆ, ಹರಿಹರ ತಾಲೂಕುಗಳ ಎಲ್ಲ ಗ್ರಾಪಂಗಳಿಗೆ ಪಿಒಎಸ್‌ ಯಂತ್ರ ನೀಡಲಾಗಿತ್ತು. ಕಳೆದೆರಡು ತಿಂಗಳುಗಳಿಂದ ಜಿಲ್ಲೆಯ ಎಲ್ಲ ಗ್ರಾಪಂಗಳಿಗೆ ಪಿಒಎಸ್‌ ಯಂತ್ರ ಒದಗಿಸ ಲಾಗಿದೆ. ಡಿಜಿಟಲ್‌ ಪಾವತಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಪ್ರೇರಣೆ ನೀಡುವ ಕಾರ್ಯ ನಡೆದಿದ್ದು ಡಿಜಿಟಲ್‌ ಪಾವತಿ ಕ್ರಮೇಣ ಇನ್ನೂ ಹೆಚ್ಚಾಗಲಿದೆ.
– ಸುರೇಶ್‌ ಇಟ್ನಾಳ್‌, ದಾವಣಗೆರೆ ಜಿಪಂ ಸಿಇಒ

46.46 ಕೋಟಿ ರೂ. ಡಿಜಿಟಲ್‌ ಪಾವತಿ
ಗ್ರಾ.ಪಂ.ಗಳಲ್ಲಿ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಒಟ್ಟು 17,479 ವ್ಯವಹಾರಗಳು ನಡೆದಿದ್ದು, 6,38,47,481 ರೂ. ಪಾವತಿಯಾಗಿದೆ. ಅದೇ ರೀತಿ ಯುಪಿಐ ಮೂಲಕ ಒಟ್ಟು 36,389 ವ್ಯವಹಾರಗಳು ನಡೆದಿದ್ದು, 2,91,682 ರೂ. ಪಾವತಿಯಾಗಿದೆ. ಪಿಒಎಸ್‌ ಯಂತ್ರದ ಮೂಲಕ 2,37,794 ವ್ಯವಹಾರಗಳು ನಡೆದಿದ್ದು, 32,60,98,211 ರೂ. ಪಾವತಿಯಾಗಿದೆ. ಒಟ್ಟಾರೆ ರಾಜ್ಯದಲ್ಲಿ 46.46 ಕೋಟಿ ರೂ. ಮೊತ್ತ ಡಿಜಿಟಲ್‌ ರೂಪದಲ್ಲಿ ಪಾವತಿ ಯಾಗುವ ಮೂಲಕ ಡಿಜಿಟಲ್‌ ವ್ಯವ ಹಾರಕ್ಕೆ ಗ್ರಾಮೀಣ ಜನರು ಜೈ ಎಂದಿದ್ದಾರೆ.

Advertisement

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next