ಬೆಂಗಳೂರು: ರಿಲಾಯನ್ಸ್ ಡಿಜಿಟಲ್ ಇದೀಗ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್ “ಡಿಜಿಟಲ್ ಇಂಡಿಯಾ ಸೇಲ್’ ಅನ್ನು ಪ್ರಾರಂಭಿಸಿದ್ದು, ಇದರಲ್ಲಿ ಅದ್ಭುತ ಕೊಡುಗೆ ಮತ್ತು ರಿಯಾಯಿತಿಯನ್ನು ನೀಡಿದೆ.
ಇಷ್ಟೇ ಅಲ್ಲದೇ, ಎಲ್ಲಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ರಿಲಾಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್ಸ್ ಹಾಗೂ www.reliancedigital.in ನಲ್ಲಿ 20 ಸಾವಿರ ರೂ.ವರೆಗೆ ಇನ್‌ಸ್ಟಂಟ್ ರಿಯಾಯಿತಿ ಪಡೆಯಬಹುದಾಗಿದೆ. ಇದನ್ನು ಹೊರತಾಗಿ ರಿಲಾಯನ್ಸ್ ಡಿಜಿಟಲ್ ಎಲೆಕ್ಟ್ರಾನಿಕ್ಸ್ ವಿಭಾಗಗಲ್ಲಿನ ಟಿವಿ, ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ರೆಫ್ರಿಜರೇಟರ್, ಆಡಿಯೋ ಸಾಧನ, ಸಣ್ಣ ಡೊಮೆಸ್ಟಿಕ್ ಸಾಧನ ಸೇರಿದಂತೆ ಇನ್ನಿತರೆ ಸಾಧನಗಳ ಮೇಲೆ ಆಕರ್ಷಕ ಕೊಡುಗೆ ನೀಡಲಾಗುತ್ತದೆ.
ಸ್ಯಾಮ್‌ಸಂಗ್ ನಿಯೋ ಕ್ಯೂಎಲ್‌ಇಡಿ ರೇಂಜ್ ಅನ್ನು 99,990 ರೂ.ಗೆ ಖರೀದಿಸಿದರೆ, 23,990 ರೂ. ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ23 ಮೊಬೈಲ್ ಅನ್ನು ಶೇ.20ರವರೆಗೆ ಕ್ಯಾಶ್‌ಬ್ಯಾಕ್ ಜತೆಗೆ ಉಚಿತವಾಗಿ ಪಡೆಯಬಹುದು. ಹೀಗೆಯೇ ಗೇಮಿಂಗ್ ಲ್ಯಾಪ್‌ಟಾಪ್‌ಗೆ ಟ್ರಾಲಿಬ್ಯಾಗ್, ಆಪಲ್ ಏರ್‌ಪಾಡ್ ಪ್ರೋಗೆ ನಿಯೋಪ್ಯಾಕ್ 3ಇನ್1 ವೈರ್‌ಲೆಸ್ ಚಾರ್ಜರ್, ಮಿಕ್ಸರ್, ವಾಷಿಂಗ್ ಮಶಿನ್ ಸೇರಿದಂತೆ ನಾನಾ ಮನೆ ಬಳಕೆಯ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡಲಾಗುತ್ತದೆ. ವಸ್ತುಗಳನ್ನು ಖರೀದಿಸಲು ಗ್ರಾಹಕರು ಯಾವುದೇ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಬಹುದು ಅಥವಾ www.reliancedigital.in ನಲ್ಲಿ ಆನ್‌ಲೈನ್ ಖರೀದಿ ಮಾಡಬಹುದು.