Advertisement

ಕೇದಾರನಾಥ ಪ್ಲಾಸ್ಟಿಕ್‌ ತಡೆಗೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ

12:54 AM Jan 07, 2023 | Shreeram Nayak |

ಡೆಹ್ರಾಡೂನ್‌: ಇತ್ತೀಚೆಗಷ್ಟೇ ಉತ್ತರಾಖಂಡದ ಕೇದಾರನಾಥ ಯಾತ್ರೆಯಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಲಗಾಮು ಹಾಕಲು ರೂಪಿಸಿದ್ದ ಡಿಜಿಟಲ್‌ ಪ್ರಯೋಗಕ್ಕೆ ಡಿಜಿಟಲ್‌ ಇಂಡಿಯಾ ಪ್ರಶಸ್ತಿ ಲಭಿಸಿದೆ.

Advertisement

ರುದ್ರಪ್ರಯಾಗ ಜಿಲ್ಲಾಡಳಿತ ಹಾಗೂ ರಿಸೈಕಲ್‌ ಎನ್ನುವ ನವೋದ್ಯಮ ಸಂಸ್ಥೆ ಸಹಯೋಗದಲ್ಲಿ ಡಿಜಿಟಲ್‌ ಡೆಪೋಸಿಟ್‌ ಆ್ಯಂಡ್‌ ರೀಫ‌ಂಡ್‌ ಸಿಸ್ಟಮ್‌ ಎನ್ನುವ ಉಪಕ್ರಮವೊಂದನ್ನು ಆರಂಭಿಸಿದ್ದವು.

ಉಪಕ್ರಮದ ಅನ್ವಯ ಕೇದರನಾಥ ಯಾತ್ರಾರ್ಥಿಗಳು ಪ್ಲಾಸ್ಟಿಕ್‌ ಪ್ಯಾಕೇಜ್‌ ಇರುವ ವಸ್ತುಗಳನ್ನು ಖರೀದಿಸಿದರೆ ಅವುಗಳ ಮೇಲೆ ಹೆಚ್ಚುವರಿಯಾಗಿ 10 ರೂ. ಠೇವಣಿ ಇಡಬೇಕು. ಬಳಿಕ ಹಿಂದಿರುಗುವಾಗ ಮರಳಿ ಪ್ಲಾಸ್ಟಿಕ್‌ ವಾಪಸ್‌ ತಂದುಕೊಟ್ಟರೆ ಹೆಚ್ಚುವರಿ ಹಣ ಯುಪಿಐ ಮೂಲಕ ರೀಫ‌ಂಡ್‌ ಆಗುತ್ತದೆ. ಈ ಉಪಕ್ರಮ ಯಶಸ್ವಿಯಾಗಿದ್ದು, ಇದರಿಂದ 1.63 ಲಕ್ಷ ಪ್ಲಾಸ್ಟಿಕ್‌ ಬಾಟಲ್‌ಗ‌ಳು ಬಳಕೆ ಬಳಿಕ ಮರಳಿ ಅಂಗಡಿ ಸೇರಿವೆ. ಈ ಹಿನ್ನೆಲೆ ಉಪಕ್ರಮಕ್ಕೆ
ಪ್ರಶಸ್ತಿ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next