Advertisement

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

02:00 PM Nov 05, 2024 | Team Udayavani |

ಬೆಂಗಳೂರು: ಸಿಬಿಐ ಅಧಿಕಾರಿಯೆಂದು ಹೇಳಿ ಕೊಂಡು ವೃದ್ಧೆಗೆ ವಿಡಿಯೋ ಕರೆ ಮಾಡಿ 10.21 ಲಕ್ಷ ರೂ. ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ 76 ವರ್ಷದ ವೃದ್ಧೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಪೊಲೀಸರು ಮಾಹಿತಿ ನೀಡಿದರು.

Advertisement

ಕನ್ನಿಂಗ್‌ಗ್ಯಾಮ್‌ ರಸ್ತೆಯಲ್ಲಿ ನೆಲೆಸಿರುವ ವೃದ್ಧೆಗೆ ವೊಡೊಫೋನ್‌ನಿಂದ ಕರೆ ಮಾಡುತ್ತಿರುವುದಾಗಿ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದಾನೆ. ನೀವು ಅಪರಾಧ ಮಾಡಿದ್ದೀರಿ. ನಿಮ್ಮ ಫೋನ್‌ ಸಂಪರ್ಕ ಕಡಿತ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೆ, ಸಿಬಿಐ ಅಧಿಕಾರಿಗಳಿಗೆ ಕರೆಗಳ ವಿವರ ನೀಡುವುದಾಗಿ ಬೆದರಿಸಿದ್ದ. ಕೆಲವು ದಿನಗಳ ಬಳಿಕ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಮತ್ತೂಬ್ಬ ವ್ಯಕ್ತಿ ಕರೆ ಮಾಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿ ಆಗಿರುವುದಾಗಿ ವೃದ್ಧೆಗೆ ಹೆದರಿಸಿದ್ದ ಎಂದು ವೃದ್ಧೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಅಲ್ಲದೆ, ವಾರಂಟ್‌ ಜಾರಿ ಆಗಿದ್ದು, ಬಂಧಿಸಲಾಗುವುದು. ತನಿಖೆಗೆ ಸಹ ಕಾರ ನೀಡಿದರೆ ಕ್ರಮ ತೆಗೆದುಕೊ ಳ್ಳುವುದಿಲ್ಲ. ಅದಕ್ಕಾಗಿ ಹಣ ವರ್ಗಾವಣೆ ಮಾಡಬೇಕು. ಅಲ್ಲದೇ ವಿಡಿಯೋ ಕರೆ ಕಡಿತ ಮಾಡದೆ ಮನೆಯ ಕೊಠಡಿಯಲ್ಲೇ ಇರಬೇಕು. ಈ ವಿಷಯವನ್ನೂ ಯಾರಿಗೂ ತಿಳಿಸಬಾರದು. ಅದರಿಂದ ಭೀತಿಗೆ ಒಳಗಾದ ವೃದ್ಧೆ, ಎರಡು ಖಾತೆಗಳಿಂದ 6.80 ಹಾಗೂ 3.41 ಲಕ್ಷ ವರ್ಗಾವಣೆ ಮಾಡಿದ್ದರು. ಆ ಬಳಿಕ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನಗೊಂಡ ವೃದ್ಧೆ ದೂರು ನೀಡಿದ್ಧಾರೆ ಎಂದು ಸೈಬರ್‌ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next