ಹೊಸದಿಲ್ಲಿ: ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆ (ಪಿಎಂಎಫ್ಬಿವೈ) ಅಡಿಯಲ್ಲಿ ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್‌ನ ಡಿಜಿಟಲ್ ಕ್ಲೈಮ್ ಸೆಟ್ಲಮೆಂಟ್ ಮಾಡ್ನೂಲ್ ಡಿಜಿಕ್ಲೈಮ್ ಅನ್ನು ದಿಲ್ಲಿಯ ಕೃಷಿ ಭವನದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಗುರುವಾರ ಅನಾವರಣಗೊಳಿಸಿದರು.
ಸಚಿವ ತೋಮರ್ ಮಾತನಾಡಿ, ರೈತರಿಗೆ ಕಾಲಮಿತಿಯಲ್ಲಿ ಮತ್ತು ಸ್ವಯಂಚಾಲಿತವಾಗಿ ಕ್ಲೈಮ್ ಮೊತ್ತ ವನ್ನು ಡಿಜಿಟಲ್ ರೂಪದಲ್ಲಿ ನೀಡಲು ನಮ್ಮ ಸಚಿವಾಲಯವು ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ಸಂಗತಿ ಯಾಗಿದೆ. ಡಿಜಿಕ್ಲೈಮ್ ಮಾಡ್ನೂಲ್ ಮೂಲಕ ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ ಮತ್ತು ಹರಿಯಾಣ ರಾಜ್ಯಗಳ ರೈತರಿಗೆ ಮಾ. 23ರಂದು ಒಟ್ಟು 1,260.35 ಕೋ. ರೂ.ಗಳ ವಿಮಾ ಕ್ಲೆçಮ್‌ಗಳನ್ನು ವಿತರಿಸಲಾಗಿದೆ ಎಂದರು.
ಉತ್ತರ ಪ್ರದೇಶದ ಕೃಷಿ ಸಚಿವರು, ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಮನೋಜ್ ಅಹುಜಾ, ಪಿಎಂಎಫ್ಬಿವೈ ಸಿಇಒ ರಿತೇಶ್ ಚೌಹಾಣ್, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪೆನಿ ಮತ್ತು ಎಸ್‌ಬಿಐ ಜನರಲ್ ಇನ್ಶೂರೆನ್ಸ್‌ನ ಸಿಎಂಡಿಗಳು, ನೇಶನಲ್ ಇನ್ಶೂರೆನ್ಸ್ ಕಂಪೆನಿ (ಎನ್‌ಐಸಿ), ಎಚ್‌ಡಿಎಫ್ಸಿ ಎರ್ಗೊ, ಬಜಾಜ್ ಅಲಯನ್ಸ್, ರಿಲಯನ್ಸ್ ಜಿಐಸಿ, ಐಸಿಐಸಿಐ ಲೊಂಬಾರ್ಡ್, ಫ್ಯೂಚರ್ ಜನರಲಿ, ಇಎಫ್ಎಫ್ಸಿಒ ಟೋಕಿಯೊ, ಚೋಳಮಂಡಲಂ ಎಂಎಸ್, ಯುನಿವರ್ಸಲ್ ಸೊಂಪೊ ಮತ್ತು ಟಾಟಾ ಎಐಜಿ ಪ್ರತಿನಿಧಿಗಳು, ಎಸ್‌ಬಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ಪ್ರತಿನಿಧಿ ಗಳು ಮತ್ತು ಹಿರಿಯ ಅಧಿಕಾರಿಗಳಿದ್ದರು.