Advertisement

ಲಾಕ್ ಡೌನ್ ಆದೇಶ ಉಲ್ಲಂಘನೆ: ನಿನ್ನೆ ಬಸ್ಕಿ, ಇವತ್ತು ಕಸ ಗುಡಿಸುವ ಶಿಕ್ಷೆ

10:45 AM Mar 27, 2020 | keerthan |

ಕಲಬುರಗಿ: ಲಾಕ್ ಡೌನ್ ಹಾಗೂ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಬುಧವಾರ ಬಸ್ಕಿ ಮತ್ತು ‘ಕೋಳಿ’ ಕೂಡುವ ಶಿಕ್ಷೆ ನೀಡಿದ್ದ ಕಲಬುರಗಿ ಪೊಲೀಸರು ಇವತ್ತು ಕೈಗಳಿಗೆ ಪೊರಕೆ ಕೊಟ್ಟು ರಸ್ತೆಗಳನ್ನು ಸ್ವಚ್ಛ ಮಾಡಿಸಿದ್ದಾರೆ.

Advertisement

ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೂ ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದವವರಿಗೆ ಎರಡು ಮೂರು ದಿನಗಳಿಂದ ಪೊಲೀಸರು ಲಾಠಿ ರುಚಿ ತೋರಿಸಿದ್ದರು.

ಲಾಠಿ ತಿಂದ ಮೇಲೂ ಬುಧವಾರ ರಸ್ತೆಗಿಳಿದವರನದನ್ನು ಹಿಡಿದು ರಸ್ತೆಯಲ್ಲೇ ಬಸ್ಕಿ ಹೊಡೆಸಿದ್ದರು. ಇದಕ್ಕೂ ಬಗ್ಗದೇ ಗುರುವಾರ ಸಹ ಲಾಕ್ ಡೌನ್ ಆದೇಶ ಉಲ್ಲಂಘಿಸಿ ರಸ್ತೆಗೆ ಬಂದವರನ್ನು ಹಿಡಿದು ಗಲ್ಲಿ-ಗಲ್ಲಿಗಳಲ್ಲಿ ಕಸ‌ ಗೂಡಿಸುವ ಶಿಕ್ಷೆ ನೀಡಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next