Advertisement

“ಸಲಗ’ನಿಗೆ ವಿಭಿನ್ನ ರೀರೆಕಾರ್ಡಿಂಗ್‌

04:27 AM Jun 29, 2020 | Lakshmi GovindaRaj |

ಚಿತ್ರ ಬಿಡುಗಡೆಗೆ ಅನುಮತಿ ಸಿಗುತ್ತಿದ್ದಂತೆ ಹಲವು ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಲಿವೆ. ಆದರಲ್ಲಿ ಸಲಗ ಕೂಡಾ ಒಂದು. ದುನಿಯಾ ವಿಜಯ್‌ ನಿರ್ದೇಶನ, ನಟನೆಯ ಸಲಗ ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸಿದ್ದಾರೆ. ಬಹುತೇಕ ಸಿನಿಮಾ ಕೆಲಸ ಪೂರ್ಣಗೊಂಡಿದೆ. ಈ ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಅದರಲ್ಲಿ ರೀರೆಕಾರ್ಡಿಂಗ್‌ ಕೂಡಾ ಒಂದು. ಸಂಗೀತ ನಿರ್ದೇಶಕ ಚರಣ್‌ ರಾಜ್‌ ತುಂಬಾ ಮುತುವರ್ಜಿ ವಹಿಸಿ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.

Advertisement

ಈಗಾಗಲೇ ಹಿನ್ನೆಲೆ ಸಂಗೀತದ ಕೆಲಸ ಪೂರ್ಣಗೊಂಡಿದೆ. ಆದರೂ ಮತ್ತೂಮ್ಮೆ ಹೊಸದನ್ನು ನೀಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಈ ಬಗ್ಗೆ ಮಾತನಾಡುವ ಚರಣ್‌ ರಾಜ್‌, ಸಲಗ ನನಗೆ ತುಂಬಾ ಖುಷಿಕೊಟ್ಟ ಸಿನಿಮಾ. ಈ ಚಿತ್ರದ ಪ್ರತಿ ವಿಭಾಗದಲ್ಲೂ ಹೊಸತನವಿದೆ. ಈಗಾಗಲೇ ಹಿನ್ನೆಲೆ ಸಂಗೀತ ಕೆಲಸ ಮುಗಿದಿದೆ. ಹಾಗಂತ ನಾವು ಸುಮ್ಮನೆ ಕುಳಿತಿಲ್ಲ. ಎಲ್ಲಿ ಚೆನ್ನಾಗಿ ಮಾಡಬಹುದೆಂದು ಪ್ರಯತ್ನಿಸುತ್ತಿದ್ದೇವೆ.

ಇದಕ್ಕೆ ಇಡೀ ತಂಡದ ಪ್ರೋತ್ಸಾಹ ಇದೆ. ಚಿತ್ರ ಮೇಲ್ನೋಟಕ್ಕೆ ಆ್ಯಕ್ಷನ್‌ನಂತೆ ಕಂಡರೂ ಇಲ್ಲಿ ಸೆಂಟಿಮೆಂಟ್‌ಗೆ ಜಾಗವಿದೆ. ಜೊತೆಗೊಂದು ಪ್ರೀತಿ, ಸಂದೇಶವೂ ಇದೆ ಎನ್ನುವುದು ಚರಣ್‌ ರಾಜ್‌ ಮಾತು. “ದುನಿಯಾ ‘ ವಿಜಯ್‌ ಇದೇ ಮೊದಲ ಸಲ ನಿರ್ದೇಶನ ಮಾಡಿರುವುದರಿಂದ ಎಲ್ಲರಿಗೂ “ಸಲಗ’ ಮೇಲೆ ಕಣ್ಣು ಇಟ್ಟಿದ್ದಾರೆ. ಎಲ್ಲರೂ ಕೂಡ ವಿಜಯ್‌ ಏನು ಮಾಡಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

“ಸಲಗ’ ಚಿತ್ರ ರೂಪುಗೊಳ್ಳಲು ನಿರ್ಮಾಪಕ ಶ್ರೀಕಾಂತ್‌ ಅವರ ಬೆಂಬಲ, ಸಹಕಾರ ಪ್ರೋತ್ಸಾಹ ಕಾರಣ. ಇನ್ನು, ತಂಡ ಕೊಟ್ಟ ಉತ್ಸಾಹದಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹಲವು ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಚಿತ್ರಮಂದಿರ ಶುರುವಾದರೆ ಎಲ್ಲರೂ ಬರುತ್ತಾರೆ ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next