Advertisement

ಶತಕ ಬಾರಿಸಿದ ಡೀಸೆಲ್ ದರ!

01:47 PM Oct 09, 2021 | Team Udayavani |

ಶಿರಸಿ: ಕಳೆದ ಎರಡು ತಿಂಗಳುಗಳಿಂದ ಏರು‌ಮುಖದಲ್ಲಿ ಇರುವ ತೈಲ ಬೆಲೆಗಳಲ್ಲಿ ಶನಿವಾರ ಡಿಸೈಲ್ ದರ ಕೂಡ ಶಿರಸಿಯಲ್ಲಿ ಶತಕ ಬಾರಿಸಿದೆ.

Advertisement

ಪೆಟ್ರೋಲ್ ದರ ಲೀ.ಗೆ 109.64 ರೂ. ಆದರೆ, ಡಿಸೈಲ್ ಲೀಟರ್ ದರ 100.06 ರೂ. ಆಗಿದೆ.

ಶುಕ್ರವಾರ ಇದ್ದ ಡಿಸೈಲ್ ಬೆಲೆಗೆ 37 ಪೈಸೆ ಹೆಚ್ಚಳ ಆದ್ದರಿಂದ ಶನಿವಾರ ನೂರು ರೂ. ಪ್ರತಿ‌ಲೀ.ಗೆ ತಲುಪಿದೆ‌. ಪೆಟ್ರೋಲ್ ದರ 30 ಪೈಸೆ ಅಧಿಕವಾಗಿದೆ.

ಶಿರಸಿಗೆ‌ ಮಂಗಳೂರಿನಿಂದ ತೈಲೋತ್ಪನ್ನಗಳು ಬರಲಿದ್ದು, ಇದರಿಂದ ಸಾಗಾಣಿಕ‌ ಮೊತ್ತ ಕೂಡ  ಏರಿಕೆ ಆಗುತ್ತವೆ. ಉಳಿದ‌ ಕಡೆಗಿಂತ ಇಲ್ಲಿ ಹೆಚ್ಚಳವಾಗಿದೆ ಎನ್ನುತ್ತಾರೆ ವರ್ತಕರು.

ಈ‌ ಮಧ್ಯೆ ಡಿಸೈಲ್ ದರ ಕೂಡ ಗಣನೀಯ ಏರಿದ್ದರಿಂದ ಉಳಿದ ಸಾಗಾಣಿಕ‌ ಮೊತ್ತಗಳ‌ ಮೇಲೂ ವ್ಯತಿರಿಕ್ತ ‌ಪರಿಣಾಮ‌‌ ಉಂಟಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next