ಹೊಸದಿಲ್ಲಿ: ದೇಶದ ಹಲವು ಭಾಗ ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾ ಗಿದೆ. ದಿಲ್ಲಿಯಲ್ಲಿ ರವಿವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 64.58 ರೂ. ಆಗಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್ ದರ 73.73 ರೂ.ಗೆ ಏರಿಕೆಯಾಗಿದ್ದು, ಇದು ನಾಲ್ಕು ವರ್ಷಗಳಲ್ಲಿಯೇ ಅತಿ ಹೆಚ್ಚು.
ಕೇಂದ್ರ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು 2017ರ ಜೂನ್ ಬಳಿಕ ಪ್ರತಿ ದಿನವೂ ತೈಲೋತ್ಪನ್ನಗಳ ದರ ಪರಿಷ್ಕರಿಸುತ್ತಿವೆ. ರವಿವಾರ ತೈಲ ಕಂಪೆನಿಗಳು ನಿಗದಿಪಡಿಸಿದ ದರದ ಪ್ರಕಾರ ಪೆಟ್ರೋಲ್, ಡೀಸೆಲ್ ದರ 18 ಪೈಸೆಯಷ್ಟು ಹೆಚ್ಚಳವಾಗಿದೆ.
2014ರ ಸೆಪ್ಟಂಬರ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 76.06 ರೂ., ಪ್ರತಿ ಲೀಟರ್ ಡೀಸೆಲ್‌ಗೆ 64.58 ರೂ. ಏರಿಕೆಯಾಗಿತ್ತು. ರವಿವಾರ ಬೆಂಗ ಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 74.90 ರೂ. ಮತ್ತು ಪ್ರತಿ ಲೀಟರ್ ಡೀಸೆಲ್‌ಗೆ 65.67 ರೂ. ಆಗಿದೆ.
ಕೇಂದ್ರ ಪೆಟ್ರೋಲಿಯಂ ಸಚಿ ವಾಲಯ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ಎಕ್ಸೆ„ಸ್ ಡ್ನೂಟಿ (ಅಬಕಾರಿ ಸುಂಕ) ತಗ್ಗಿಸಬೇಕು ಎಂದು ಮನವಿ ಮಾಡಿದ್ದರೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟಿÉ ಬಜೆಟ್‌ನಲ್ಲಿ ಯಾವುದೇ ರೀತಿಯ ಘೋಷಣೆ ಮಾಡಿರಲಿಲ್ಲ. ಸಚಿವ ಜೇಟ್ಲಿ 2014ರ ನವೆಂಬರ್‌ನಿಂದ 2016ರ ಜನವರಿ ವರೆಗೆ ಒಂಬತ್ತು ಬಾರಿ ಎಕ್ಸೆ„ಸ್ ಡ್ನೂಟಿಯನ್ನು ಪರಿಷ್ಕರಿ ಸಿದ್ದರು. ಇದಾದ ಬಳಿಕ 2 ರೂ.ಗಳಷ್ಟು ಕಡಿಮೆ ಮಾಡಿದ್ದರು. ಇದಾದ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗಿತ್ತು.
ಅನಂತರ ಕೇಂದ್ರ ಸರಕಾರ ರಾಜ್ಯಗಳಿಗೆ ಮನವಿ ಮಾಡಿ ಇದೇ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿತ್ತು. ಅದರಂತೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಸರಕಾರಗಳು ವ್ಯಾಟ್ ತಗ್ಗಿಸಿ ಆದೇಶ ಹೊರಡಿಸಿದ್ದವು.