Advertisement

ಪೆಟ್ರೋಲ್‌, ಡಿಸೇಲ್‌ ಬೆಲೆ ಹೆಚ್ಚಳ; 4 ವರ್ಷಗಳಲ್ಲೆ ಗರಿಷ್ಠ 

03:44 PM Apr 01, 2018 | |

ಹೊಸದಿಲ್ಲಿ: ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆ ಲೀಟರ್‌ಗೆ 18 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ  4 ವರ್ಷಗಳಲ್ಲೇ ಗರಿಷ್ಠ  ಪೆಟ್ರೋಲ್‌ಗೆ 73.73 ಮತ್ತು ಡಿಸೇಲ್‌ಗೆ 64.50 ರೂಪಾಯಿಗೆ ಬಂದು ತಲುಪಿದೆ.

Advertisement

21014 ರ ಸೆಪ್ಟಂಬರ್‌ನಲ್ಲಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 76.06 ರೂಪಾಯಿ ಆಗಿದ್ದರೆ ಡಿಸೇಲ್‌ ಬೆಲೆ 64.22 ರೂಪಾಯಿ ಆಗಿತ್ತು. 

ಪ್ರಸಕ್ತ ಬಜೆಟ್‌ನಲ್ಲಿ  ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅಬಕಾರಿ ಸುಂಕವನ್ನು 2 ರುಪಾಯಿ ಕಡಿತಗೊಳಿಸಿದ್ದರು. 

 ಪೆಟ್ರೋಲ್ ಮತ್ತು ಡೀಸೆಲ್‌ನ  ಚಿಲ್ಲರೆ ಬೆಲೆ ದಕ್ಷಿಣ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತದಲ್ಲೇ ಹೆಚ್ಚು , ಪಂಪ್ ದರದ  ಅರ್ಧದಷ್ಟು  ತೆರಿಗೆ ಇದಕ್ಕೆ  ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next