ಉಡುಪಿ: ಮಲ್ಪೆ ಕಡಲ ಕಿನಾರೆಯ ಅಳಿವೆ ಬಾಗಿಲಿನಲ್ಲಿ ಸಮುದ್ರ ಮಧ್ಯೆ ಡೀಸೆಲ್ ಖಾಲಿಯಾಗಿ ನಿಂತಿದ್ದ ಮೀನುಗಾರಿಕಾ ಬೋಟ್ ಅನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರವಿವಾರ ಮಧ್ಯಾಹ್ನ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
Advertisement
ಮಧ್ಯಾಹ್ನ ಒಂದು ಗಂಟೆಗೆ ಸುಮಾರಿಗೆ ಮಲ್ಪೆಯ ಶ್ರೀರಾಮ ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಈ ಘಟನೆ ನಡೆದಿದೆೆ. ಅಪಾಯಕಾರಿಯಾದ ಅಳಿವೆ ಭಾಗದಲ್ಲಿ ಕಲ್ಲಿನ ಸಮೀಪಕ್ಕೆ ಬಂದು ನಿಂತಿತ್ತು. ಇದನ್ನು ಗಮನಿಸಿದ ಕರಾವಳಿ ಕಾವಲು ಪಡೆಯ ಪೊಲೀಸರು ಅಲ್ಲಿಗೆ ಹೋಗಿ, ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮಲ್ಪೆ ಬಂದರಿಗೆ ಕರೆತಂದಿದ್ದಾರೆ.
ಇದನ್ನೂ ಓದಿ:ಕಾರು ಮಾರಾಟದಲ್ಲಿ ಹುಂಡೈಯನ್ನು ಮೀರಿಸಿದ ಟಾಟಾ