Advertisement

ಮದುವೆಯಾಗುತ್ತೀಯಾ ಎಂದು ಕೇಳಿರಲಿಲ್ಲ..! : ಬೋಬ್ಡೆ ಸ್ಪಷ್ಟನೆ

05:12 PM Mar 08, 2021 | Team Udayavani |

ನವ ದೆಹಲಿ : ಇತ್ತೀಚೆಗಿನ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಮುಖ್ಯ ನಾಯಮೂರ್ತಿ ಎಸ್ ಎ ಬೋಬ್ಡೆ ಮಹಿಳಾ ದಿನಾಚರಣೆಯ ದಿನದಂದು ಸ್ಪಷ್ಟೀಕರಣ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಗೌರವವನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹೇಳಿದ್ದಾರೆ.

Advertisement

ಕಳೆದ ವಾರ ಅತ್ಯಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ವೇಳೆ ಬೋಬ್ಡೆ ಕೇಳಿದ ಪ್ರಶ್ನೆಯೊಂದು ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು, ಆ ವಿಷಯಕ್ಕೆ ಪೂರ್ಣ ವಿರಾಮ ಇಡುವಂತೆ ಇಂದು ಬೋಬ್ಡೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಓದಿ : ಮಹಿಳಾ ದಿನಾಚರಣೆ ವಿಶೇಷ : ಪತಿ ಆಸರೆ ಕಳೆದುಕೊಂಡರೂ ಕೃಷಿಯಲ್ಲಿ ಸಾಧನೆ

ನಾವು ಅವನನ್ನು(ಅತ್ಯಾಚಾರ ಪ್ರಕರಣದ ಆರೋಪಿ) ಮದುವೆಯಾಗುವಂತೆ ಕೇಳಲಿಲ್ಲ. ಮದುವೆಯಾಗುವಿರೇ..? ಎಂದು ಕೇಳಿದ್ದೇವೆ. ಮದುವೆಯಾಗು ಎಂದು ಹೇಳಲಿಲ್ಲ. ನಮ್ಮ ಪ್ರಶ್ನೆಯ ಅರ್ಥ ಸುದ್ದಿಗಳಲ್ಲಿ ವರದಿಯಾಗಿದ್ದಕ್ಕಿಂತ ಭಿನ್ನವಾಗಿತ್ತು. ಸುಪ್ರೀಂ ಕೋರ್ಟ್ ಎಂದಿಗೂ ಮಹಿಳೆಯರಿಗೆ ಗೌರವವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಶಾಲಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯ ತಂತ್ರಜ್ಞ ಮೋಹಿತ್ ಸುಭಾಷ್ ಚವಾಣ್ ಅವರ ಜಾಮೀನು ಕೋರಿಕೆಯನ್ನು ಮಾರ್ಚ್ 1 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾನೂನಿನಡಿಯಲ್ಲಿ ಆರೋಪಗಳನ್ನು ಎದುರಿಸಿದ್ದರು.

Advertisement

ನೀವು ಮದುವೆಯಾಗಲು ಬಯಸಿದರೆ, ನಾವು ನಿಮಗೆ ಸಹಾಯ ಮಾಡಬಹುದು. ಇಲ್ಲದಿದ್ದರೆ, ನೀವು ನಿಮ್ಮ ಕೆಲಸವನ್ನು ಕಳೆದುಕೊಂಡು ಜೈಲಿಗೆ ಹೋಗುತ್ತೀರಿ. ನೀವು ಹುಡುಗಿಯನ್ನು ಮೋಹಿಸಿದ್ದೀರಿ, ಅವಳ ಮೇಲೆ ಅತ್ಯಾಚಾರ ಮಾಡಿದ್ದೀರಿ. ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ನಂತರ ನ್ಯಾಯಾಲಯವು ನಿಮ್ಮನ್ನು ಒತ್ತಾಯಿಸಿತು ಎಂದು ನೀವು ಹೇಳಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅರ್ಜಿದಾರರ ವಕೀಲರಿಗೆ ತಿಳಿಸಿದ್ದರು.

ಇನ್ನು, ಈ ವಿಚಾರಕ್ಕೆ ಸಂಬಂಧಪಟ್ಟಂತೆ, ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ಬರಹಗಾರರು ಮತ್ತು ಕಲಾವಿದರು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರಿಗೆ ಕ್ಷಮೆಯಾಚಿಸಬೇಕು ಮತ್ತು ಅವರ ಮಾತನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು.

ಅವರು ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿ 5,000 ಕ್ಕೂ ಹೆಚ್ಚು ಜನರು ಪತ್ರಕ್ಕೆ ಸಹಿ ಹಾಕಿದ್ದರು. ನ್ಯಾಯಾಲಯದ ಅಧಿಕಾರಿಯೊಬ್ಬರು ಈ ಟೀಕೆಗಳನ್ನು ಅನ್ಯಾಯವೆಂದು ಹೇಳಿದ್ದಾರೆ, 18 ವರ್ಷ ತುಂಬಿದ ನಂತರ ಅಪ್ರಾಪ್ತ ವಯಸ್ಕ ಬಾಲಕಿಯನ್ನು, ಮದುವೆಯಾಗುವುದಾಗಿ ಆರೋಪಿಯು ಒಪ್ಪಿಕೊಂಡಿರುವ “ನ್ಯಾಯಾಂಗ ದಾಖಲೆಗಳನ್ನು” ಆಧರಿಸಿದೆ ಎಂದು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಇಂದು ಈ ವಿಷಯದಲ್ಲಿ “ಸಂಪೂರ್ಣ ತಪ್ಪು ವರದಿ ಆಗಿದೆ” ಎಂದು ಹೇಳಿರುವುದು ವರದಿಯಾಗಿದೆ.

ಓದಿ : ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಮಹಿಳೆಯರ ಸಾಥ್ : ದೆಹಲಿ ಗಡಿಗೆ ಲಗ್ಗೆಯಿಟ್ಟ ರೈತ ನಾರಿಯರು

Advertisement

Udayavani is now on Telegram. Click here to join our channel and stay updated with the latest news.

Next