Advertisement
ನಲವತ್ತು ಪರ್ಸೆಂಟ್ ಆರೋಪವನ್ನು ಪ್ರತಿ ದಿನ ಜಪ ಮಾಡುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ, ದುರ್ಬೀನು ಹಾಕಿ ಹುಡುಕಾಟ ಆರಂಭಿಸಿದಾಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕ ಪ್ರಕರಣದ ಜತೆಗೆ ಈಗ ಇಂಧನ ಇಲಾಖೆಯಲ್ಲೂ ಒಂದಿಷ್ಟು ವಿಚಾರಗಳು ಲಭ್ಯವಾಗಿದೆ. ವಿದ್ಯುತ್ ಒಡಂಬಡಿಕೆಗಳ ಪೈಕಿ ಕೆಲವು ಸಂಶಯಾತ್ಮಕವಾಗಿರುವುದು ಕಂಡು ಬಂದಿವೆ.
Related Articles
Advertisement
ತಂತ್ರಜ್ಞಾನ ಮತ್ತು ವಿದ್ಯುತ್ ಉತ್ಪಾದನೆ ನಿಂತ ನೀರಲ್ಲ. ಆಡಳಿತ ನಡೆಸುವವರಿಗೂ ಒಪ್ಪಂದದ ಪ್ರಸ್ತಾವನೆ ಸಿದ್ಧಪಡಿಸುವವರಿಗೂ ಇರಬೇಕಾದ ಪ್ರಾಥಮಿಕ ಜ್ಞಾನ. ಆದರೆ, ರಾಜ್ಯದ ಜನರ ಕಷ್ಟವನ್ನೇ ‘ಲಾಭದ ವ್ಯವಹಾರ’ಕ್ಕೆ ‘ಕೈ’ ಹಾಕಿವೆ ಎಂದು ತಜ್ಞರು ದಾಖಲೆ ಪರಿಶೀಲನೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.
ದರ ನಿಗದಿಯು, ಒಪ್ಪಂದದ ಅವಧಿ, ಸರ್ಕಾರಕ್ಕೆ ತನಗೆ ಬೇಕಾದ ಷರತ್ತುಗಳನ್ನು ಹಾಕಿಕೊಳ್ಳುವ ಅವಕಾಶಗಳಿದ್ದರೂ ಕಾಣದ ಕೈಗಳ ಪ್ರಭಾವದಿಂದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂಬುದು ಕಂಡುಬಂದಿವೆ.
ಪವನ ಹಾಗೂ ಸೌರ ವಿದ್ಯುತ್ ಮೂಲದ ಸರಾಸರಿ ವೆಚ್ಚ ಪರಿಗಣಿಸಿಲ್ಲ. ಗರಿಷ್ಠ ದರವನ್ನು ನಿಗದಿ ಮಾಡುವಾಗ ನಿರ್ದಿಷ್ಟ ಕಾಲಮಿತಿ ಕಡೆಗಣಿಸಲಾಗಿದೆ. ಹೆಚ್ಚು ಬಳಕೆ ಮಾಡುವ ಅವಧಿ, ಸಾಮಾನ್ಯ ಅವಧಿ ಎರಡರ ಮಧ್ಯೆ ವ್ಯತ್ಯಾಸ ತಿಳಿಯದೇ ಏಕರೂಪದಲ್ಲಿ ಯೂನಿಟ್ ದರ ನಿಗದಿ ಮಾಡಿ ಬೊಕ್ಕಸಕ್ಕೆ ಅನಗತ್ಯ ಹೊರೆ ಹೇರಲಾಗಿದೆ ಎಂದು ಅಂದಾಜಿಸಲಾಗಿದೆ.
ಎಷ್ಟು ನಷ್ಟ?
ಪ್ರತಿ ಯೂನಿಟ್‌ಗೆ ಗರಿಷ್ಠ 11 ರೂ. ವರೆಗೆ 25 ವರ್ಷಗಳವರೆಗೆ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎರಡು ಸಾವಿರ ಕೋಟಿ ರೂ. ವರೆಗೂ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂಬ ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಸರ್ಕಾರ ಪ್ರತಿ ಒಡಂಬಡಿಕೆಯನ್ನು ಪರಿಶೀಲಿಸಿ ಕಾನೂನು ತಜ್ಞರ ಮೂಲಕ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಕ್ರಿಯೆ ನಡೆಸಿದೆ.