Advertisement

Kejriwal: 21 ದಿನಗಳಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡಿಲ್ಲ…: ಜೈಲಿನತ್ತ ಹೊರಟ ಕೇಜ್ರಿವಾಲ್

05:10 PM Jun 02, 2024 | Team Udayavani |

ನವದೆಹಲಿ: 21 ದಿನಗಳ ಜಾಮೀನಿನ ಮೇಲೆ ಹೊರಗೆ ಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಶರಣಾಗಲು ಇಂದು ಮಧ್ಯಾಹ್ನ ತಿಹಾರ್ ಜೈಲಿನತ್ತ ಪಯಣ ಬೆಳೆಸಿದ್ದಾರೆ.

Advertisement

ಶರಣಾಗತಿಗೂ ಮುನ್ನ ತಂದೆ-ತಾಯಿಯ ಆಶೀರ್ವಾದ ಪಡೆದರು ಬಳಿಕ ಪತ್ನಿ ಸುನೀತಾ ಕೇಜ್ರಿವಾಲ್ ಹಾಗೂ ಪಕ್ಷದ ಕಾರ್ಯಕರ್ತರ ಜೊತೆಗೂಡಿ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮಿಸಿ ಗೌರವ ಸಲ್ಲಿಸಲು ಇದಾದ ಬಳಿಕ ಹನುಮಾನ್ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಬಳಿಕ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರನ್ನು ಭೇಟಿಯಾದರು.

ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಅರ್ಪಿಸಿದರು. ಮಧ್ಯಂತರ ಜಾಮೀನು ಫಲಕಾರಿಯಾಗಿದೆ 21 ದಿನಗಳಲ್ಲಿ ನಾನು ಒಂದು ನಿಮಿಷವೂ ವ್ಯರ್ಥ ಮಾಡಲಿಲ್ಲ. ಎಲ್ಲ ಪಕ್ಷಗಳ ಪರ ಪ್ರಚಾರ ಮಾಡಿದ್ದೇನೆ. ದೇಶ ಉಳಿಸಲು ಪ್ರಚಾರ ಮಾಡಿದ್ದೇನೆ. ದೇಶ ಮುಖ್ಯ, ಪಕ್ಷ ಬಳಿಕ ಇದೊಂದು ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದಾರೆ. ನೀವೆಲ್ಲರೂ ನಿಮ್ಮ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ನಾನು ಜೈಲಿನಲ್ಲಿದ್ದರೂ ನನಗೆ ನಿಮ್ಮದೇ ಚಿಂತೆ ಹಾಗಾಗಿ ನೀವು ಸಂತೋಷವಾಗಿದ್ದರೆ ಜೈಲಿನಲ್ಲಿರುವ ನಾನು ಕೂಡ ಸಂತೋಷವಾಗಿದ್ದೇನೆ ಎಂದರ್ಥ ಹಾಗಾಗಿ ನಿಮ್ಮ ನಿಮ್ಮ ಆರೋಗ್ಯದ ಕಾಳಜಿ ವಹಿಸಿಕೊಳ್ಳಿ ಎಂದು ಹೇಳಿಕೊಂಡಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂದಿಯಾಗಿದ್ದ ಕೇಜ್ರಿವಾಲ್​ ಅವರಿಗೆ ಮೇ 10ರಂದು ಸುಪ್ರೀಂ ಕೋರ್ಟ್​ ಇಪ್ಪತ್ತೊಂದು ದಿನಗಳ ಮಧ್ಯಂತರ ಜಾಮೀನು ನೀಡಿತ್ತು ಇದೀಗ ಜಾಮೀನು ಅವಧಿ ಜೂನ್​ 1ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ತಿಹಾರ್ ಜೈಲಿಗೆ ಶರಣಾಗಲು ತೆರಳಿದ್ದಾರೆ.

ಈ ವೇಳೆ, ಪತ್ನಿ ಸುನೀತಾ ಕೇಜ್ರಿವಾಲ್​, ಪಕ್ಷದ ನಾಯಕರು, ಸಚಿವರಾದ ಅತಿಶಿ, ಕೈಲಾಶ್ ಗಹ್ಲೋಟ್, ಸೌರಭ್ ಭಾರಧ್ವಾಜ್, ರಾಜ್ಯಸಭಾ ಸದಸ್ಯರಾದ ಸಂಜಯ್​ ಸಿಂಗ್, ಸಂದೀಪ್ ಪಾಠಕ್​ ಹಾಗೂ ದುರ್ಗೇಶ್ ಪಾಠಕ್​, ರಾಖಿ ಬಿರ್ಲಾ, ರೀನಾ ಮೊದಲಾದವರು ಇದ್ದರು.

Advertisement

ಇದನ್ನೂ ಓದಿ: T-Series ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಸಬ್ ಸ್ಕ್ರೈಬ್ಡ್ ಯೂಟ್ಯೂಬರ್ ಆದ MrBeast

Advertisement

Udayavani is now on Telegram. Click here to join our channel and stay updated with the latest news.

Next