ಮುಂಬಯಿ: ‘ಉಂಚೈ’ ಸ್ಕ್ರೀನಿಂಗ್ ಸಮಾರಂಭದಲ್ಲಿ ಹಿರಿಯ ನಟಿ ಜಯಾ ಬಚ್ಚನ್ ಅವರು ಕಂಗನಾ ರಣಾವತ್ ಅವರನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಬಾಲಿವುಡ್ ಅಭಿಮಾನಿಗಳಲ್ಲಿ ಚರ್ಚೆ ಹುಟ್ಟು ಹಾಕಿದೆ.
ಮುಂಬೈನಲ್ಲಿ ಬುಧವಾರ ನಡೆದ ಸೂರಜ್ ಬರ್ಜಾತ್ಯಾ ಅವರ ‘ಉಂಚೈ’ ವಿಶೇಷ ಪ್ರದರ್ಶನದಲ್ಲಿ ಹಲವು ನಟ-ನಟಿಯರು ಭಾಗವಹಿಸಿದ್ದರು. ಜಯಾ ಬಚ್ಚನ್ ಅವರು ಕಂಗನಾ ಅವರತ್ತ ತಿರುಗಿಯೂ ನೋಡದ ಈವೆಂಟ್‌ನ ವಿಡಿಯೋ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಹಿರಿಯ ನಟಿ ಈವೆಂಟ್‌ನಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಕಂಗನಾ ಅವರು ಜಯಾ ಬಚ್ಚನ್ ತನ್ನ ಹತ್ತಿರ ಬರುತ್ತಿರುವುದನ್ನು ಗಮನಿಸಿ ನಗುತ್ತಾ ಹಿರಿಯ ನಟಿಯನ್ನು ಸ್ವಾಗತಿಸಿದರು. ಆದಾಗ್ಯೂ, ಜಯಾ ತಮ್ಮ ಶುಭಾಶಯಗಳನ್ನು ಸ್ವೀಕರಿಸದೆ ಅನುಪಮ್ ಖೇರ್ ಅವರೊಂದಿಗೆ ಮಾತನಾಡಲು ಮುಂದಾದರು.
Related Articles
”ಕಂಗನಾ ರಣಾವತ್ ಅವರ ಸ್ಥಾನವನ್ನು ತೋರಿಸಿದ್ದಕ್ಕಾಗಿ ಜಯಾಬಚ್ಚನ್ ಅವರಿಗೆ ಧನ್ಯವಾದಗಳು” ಎಂದು ಹಲವರು ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
‘ಉಂಚೈ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಬೊಮನ್ ಇರಾನಿ, ಡ್ಯಾನಿ ಡೆನ್ಜಾಂಗ್ಪಾ, ನೀನಾ ಗುಪ್ತಾ, ಸಾರಿಕಾ ಮತ್ತು ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.