Advertisement

ಸಿಎಂ ವೈಯಕ್ತಿಕ ವಿಚಾರ ಕೆದಕಿದ್ದೇನಾ?: ಸುಮಲತಾ

01:43 AM Apr 12, 2019 | Team Udayavani |

ಶ್ರೀರಂಗಪಟ್ಟಣ: ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗುರುವಾರ ಬೆಳಗ್ಗೆ ನಗರದ ಗುಂಬಜ್‌ನ ಟಿಪ್ಪು ಸಮಾಧಿಗೆ ನಮಿಸಿ, ಹೂವಿನ ಚಾದರ ಹೊದಿಸಿ, ಪುಷ್ಪಾರ್ಚನೆ
ಮಾಡಿದರು.

Advertisement

ಈ ವೇಳೆ, ಸುಮಲತಾ ಹೆಸರಿನಲ್ಲಿ ಧರ್ಮಗುರುವಿನಿಂದ ವಿಶೇಷ ಪ್ರಾರ್ಥನೆ ನಡೆಯಿತು.ಬಳಿಕ, ತಾಲೂಕಿನ ವಿವಿಧೆಡೆ ರೋಡ್‌ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದರು. ದರ್ಶನ್‌ ಹಾಗೂ ಯಶ್‌ ಪ್ರಚಾರಕ್ಕೆ ಸಾಥ್‌ ನೀಡಿದರು.

ಪ್ರಚಾರದ ವೇಳೆ, ಸಿಎಂ ವಿರುದ್ಧ ಹರಿಹಾಯ್ದ ಅವರು, ಪುಲ್ವಾಮಾ ದಾಳಿ ನಡೆಯೋದು ಗೊತ್ತಿದ್ದೂ ಕೇಂದ್ರಕ್ಕೆ ಮಾಹಿತಿ ಕೊಡಲಿಲ್ಲವೇಕೆ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಮಾಹಿತಿ ಕೊಟ್ಟು ಸೈನಿಕರ ಜೀವವನ್ನು ಉಳಿಸುವಪ್ರಯತ್ನವನ್ನು ಅಂದೇ ಮಾಡಬಹುದಾಗಿತ್ತಲ್ಲವೇ. ಅದನ್ನು  ಮುಚ್ಚಿಟ್ಟಿದ್ದೇಕೆ ಎಂದು ಪ್ರಶ್ನಿಸಿದರು. ಕಲ್ಲು ತೂರಾಟ,ದಬ್ಟಾಳಿಕೆ, ಅಹಂಕಾರದ ಮಾತುಗಳು ಅವರ ಕಡೆಯಿಂದಲೇ
ಬರುತ್ತಿವೆ. ನಮ್ಮ ಕಡೆಯಿಂದ ಅಂತಹದ್ದು ಯಾವುದೂ ನಡೆಯುತ್ತಿಲ್ಲ. ಇಂಟಲಿಜೆನ್ಸ್‌ ಅಧಿಕಾರಿಗಳನ್ನು ಬಿಟ್ಟು ಅವರೇ ಆ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

“ನಾನು ಸಿಂಗಾಪೂರ್‌ಗೆ ಹೋಗ್ತಿàನೋ, ಅಮೆರಿಕಾಗೆ ಹೋಗ್ತಿàನೋ ಅನ್ನೋ ವಿಚಾರ ಇವರಿಗೇಕೆ. ಅವರು ಎಲ್ಲಿಗೆ ಹೋಗ್ತಾರೆ ಅಂತ ನಾನೇದಾರೂ ಪ್ರಶ್ನಿಸಿದ್ದೀನಾ?. ಅವರು
ಯಾವ ಹೋಟೆಲ್‌ನಲ್ಲಿ ಇದ್ದಾರೆ. ಅಲ್ಲಿ ಏನೇನು ನಡೆಯುತ್ತಿದೆ. ಅಲ್ಲಿ ಕುಳಿತು ಸಿಎಂ ಏನ್ಮಾಡ್ತಿದ್ದಾರೆ ಎಂದು ಎಂದಾದರೂ ಕೇಳಿದ್ದೇನಾ?. ಅವರು ಒಬ್ಬ ಜವಾಬ್ದಾರಿಯುತ
ಮುಖ್ಯಮಂತ್ರಿಯಾಗಿ ನಡೆದುಕೊಳ್ಳುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.

Advertisement

ಬಿಜೆಪಿ ಸೇರಲಾರೆ:“ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಬಿಜೆಪಿ ಪಕ್ಷದ ಬೆಂಬಲ ಸಿಕ್ಕಿದೆಯಷ್ಟೇ. ನಾನು ಬಿಜೆಪಿ ಸೇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next