Advertisement

ಡಯಾಲಿಸಿಸ್‌ಯಂತ್ರ ಸ್ಥಗಿತ: ರೋಗಿಗಳ ಪರದಾಟ

05:37 PM Aug 28, 2021 | Team Udayavani |

ರಾಮನಗರ: ಕೋವಿಡ್‌ ಸೋಂಕು ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ವ್ಯವಸ್ಥೆಯತ್ತ ಗಮನಹರಿಸಿರುವ ಸರ್ಕಾರ ಇತರೆ ರೋಗ -ರುಜಿನುಗಳ ಅಗತ್ಯಗಳ ಬಗ್ಗೆ ಕಾಳಜಿವಹಿಸುತ್ತಿಲ್ಲ ಎಂಬುದಕ್ಕೆ ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಯಂತ್ರಗಳು ಸ್ಥಗಿತವಾಗಿ ರೋಗಿಗಳು ಪರದಾಡಬೇಕಾದ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದೆ.

Advertisement

ಜಿಲ್ಲಾಸ್ಪತ್ರೆಯಲ್ಲಿ 7 ಡಯಾಲಿಸಿಸ್‌ ಯಂತ್ರಗಳಿವೆ. ಅನೇಕ ದಿನಗಳಿಂದ 4 ಡಯಾಲಿಸಿಸ್‌ ಯಂತ್ರಗಳು ಕೆಟ್ಟು ಹೋಗಿದ್ದವು. ಇದ್ದ 3 ಯಂತ್ರಗಳ ಮೂಲಕ ಹೇಗೋ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಗುರುವಾರ ಉಳಿದ 3 ಡಯಾಲಿಸಿಸ್‌ ಯಂತ್ರಗಳು ಕೆಟ್ಟು ಹೋಯಿತು. ರೋಗಿಗಳು ಪರದಾಡುವ ಸ್ಥಿತಿ ಒದಗಿತು. ಡಯಾಲಿಸಿಸ್‌ ತೀರಾ ಅಗತ್ಯವಿದ್ದ ಇಬ್ಬರು ರೋಗಿಗಳನ್ನು ಜಿಲ್ಲಾಸ್ಪತ್ರೆಯ ವೈದ್ಯರು ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಚನ್ನಪಟ್ಟಣಕ್ಕೆಕಳುಹಿಸಿ ಅಲ್ಲಿ ಡಯಾಲಿಸಿಸ್‌ ಮಾಡಿಸಿದ್ದಾರೆ.

ಸಮಸ್ಯೆಗೆ ಸರ್ಕಾರವೇ ಕಾರಣ!: ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್‌ ಯಂತ್ರಗಳು ಆಗಾಗ್ಗೆ ಕೆಟ್ಟು ರೋಗಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ರಾಜ್ಯ ಸರ್ಕಾರವೇ ಕಾರಣ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯಂತ್ರಗಳನ್ನು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆಕೊಟ್ಟಿದೆ. ಗುತ್ತಿಗೆದಾರರು ರಾಮನಗರ ಜಿಲ್ಲೆ ಸೇರಿ ದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಯಂತ್ರಗಳನ್ನು ಸ್ಥಾಪಿಸಿದ್ದಾರೆ. ತಲಾ ರೋಗಿಯೊಬ್ಬರಿಗೆ ವೆಚ್ಚವಾಗುವ ಹಣವನ್ನು ರಾಜ್ಯ ಸರ್ಕಾರವೇ ಗುತ್ತಿಗೆದಾರರಿಗೆ ಭರಿಸುತ್ತಿದೆ. ಗುತ್ತಿಗೆದಾರರು ಯಂತ್ರಗಳು, ಅದಕ್ಕೆ ಬೇಕಾದ ಔಷಧಗಳು
ಮತ್ತು ಸಿಬ್ಬಂದಿಯನ್ನು ನಿಯೋಜಿಸುತ್ತಾರೆ.

ಇದನ್ನೂ ಓದಿ:ಅತ್ಯಾಚಾರಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ನಟ ಜಗ್ಗೇಶ್  

Advertisement

ಇಲ್ಲಿ ಸ್ಥಳೀಯ ಆರೋಗ್ಯ ಇಲಾಖೆಯಾಗಲಿ, ಜಿಲ್ಲಾಸ್ಪತ್ರೆಯ ಆಡಳಿತದ ಪಾತ್ರಕಡಿಮೆ.ಕಳೆದಕೆಲವು ತಿಂಗಳುಗಳಿಂದ ಗುತ್ತಿಗೆದಾರರಿಗೆ ರಾಜ್ಯ ಸರ್ಕರು ಸುಮಾರು 34 ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಗುತ್ತಿಗೆದಾರರು ಯಂತ್ರಗಳ ನಿರ್ವಹಣೆ ಮತ್ತು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವ ಆಸಕ್ತಿ ತೋರಿಸುತ್ತಿಲ್ಲ ಎಂದು ಗೊತ್ತಾಗಿದೆ.ಡಯಾಲಿಸಿಸ್‌ ಯಂತ್ರಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದ್ದು, ಪ್ರತಿ 2-3 ತಿಂಗಳಿಗೆ ಒಮ್ಮೆ ಸರ್ವಿಸ್‌ ಮಾಡುವುದು ಅತ್ಯಗತ್ಯವಾಗಿದೆ. ಯಂತ್ರಗಳಿಗೆ ಒದಗಿಸುವ ನೀರು ಸಹ ಆರ್‌.ಒ. ಘಟಕದಲ್ಲಿ ಶುದ್ಧೀಕರಣಗೊಂಡು ಯಂತ್ರಗಳನ್ನು ತಲುಪಬೇಕು. ನೀರಿನ ಶುದ್ಧತೆಯಲ್ಲಿ ಸ್ಪಲ್ಪವೇ ವ್ಯತ್ಯಾಸವಾದರೂ ಯಂತ್ರಗಳುಕೆಲಸ ನಿಲ್ಲಿಸುತ್ತವೆ. ಡಯಾಲಿಸಿಸ್‌ ಯಂತ್ರಗಳು ಬಹಳ ಸೂಕ್ಷ ¾ ಇದ್ದು, ಅದರ ನಿರ್ವಹಣೆಗೆ ತಾಂತ್ರಿಕ ನೈಪುಣ್ಯತೆ ಬೇಕು, ಸ್ಥಳೀಯವಾಗಿ
ಇಂತಹ ನಿಪುಣರು ಇಲ್ಲ, ಹೀಗಾಗಿ ಜಿಲ್ಲಾಸ್ಪತ್ರೆಯ ಅಧಿಕಾರಿ ವರ್ಗ ಕೈಚೆಲ್ಲಿಕುಳಿತಿವೆ.

ವ್ಯವಸ್ಥೆ ಸುಧಾರಿಸಲು ಮನವಿ: ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್‌ ಕೇಂದ್ರದಲ್ಲಿ ನಿತ್ಯ ಸರಾಸರಿ 20-25 ರೋಗಿಗಳಿಗೆ ಡಯಾಲಿಸಿಸ್‌ ಮಾಡಬಹುದಾಗಿದೆ. ಒಂದು ಯಂತ್ರದಲ್ಲಿ ಒಬ್ಬರಿಗೆ ಡಯಾಲಿಸಿಸ್‌ ಮಾಡಲು 4 ಗಂಟೆ ತಗುಲುತ್ತದೆ. ಈ ಲೆಕದ ‌R ಲ್ಲಿ ಒಂದು ಯಂತ್ರದಲ್ಲಿ
ನಿತ್ಯ ಮೂವರು ರೋಗಿಗಳಿಗೆ ಮಾತ್ರ ಈ ಸೇವೆ ನೀಡಬಹುದಾಗಿದೆ. ಹೀಗಾಗಿ ಎಲ್ಲಾ 7 ಯಂತ್ರಗಳು ಚಾಲನೆಯಲ್ಲಿದ್ದರೆ ರೋಗಿಗಳ ಚಿಕಿತ್ಸೆ ಸಾಧ್ಯವಾಗುತ್ತದೆ. ಡಯಾಲಿಸಿಸ್‌ ವ್ಯವಸ್ಥೆಗಳನ್ನು ಇನ್ನಷ್ಟು ಸುಧಾರಿಸಬೇಕು ಎಂದು ನಾಗರೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಮಸ್ಯೆಗೆ ತಕ್ಷಣ ಸ್ಪಂದಿಸಲು ಜಿಲ್ಲಾಧಿಕಾರಿ ಆಗ್ರಹ
ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲಾ 7 ಡಯಾಲಿಸಿಸ್‌ ಯಂತ್ರಗಳು ಭಾನುವಾರದ ವೇಳೆಗೆ ರೋಗಿಗಳ ಚಿಕಿತ್ಸೆಗೆ ಲಭ್ಯವಾಗುವ ವಿಶ್ವಾಸವಿದೆ. ಡಯಾಲಿಸಿಸ್‌ ಯಂತ್ರಗಳು ಕೆಟ್ಟು ಉಂಟಾದ ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್‌.ಕೆ. ಅವರ ಗಮನ ಸೆಳೆಯಲಾಗಿ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯ ಆಯುಕ್ತರಿಗೆ ಕರೆ ಮಾಡಿ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ತಜ್ಞರು ಶುಕ್ರವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ ದುರಸ್ಥಿ ಕೈಗೊಂಡಿದ್ದು ಶುಕ್ರವಾರ ಮಧ್ಯಾಹ್ನದ ವೇಳೆ 3 ಯಂತ್ರಗಳು ಪುನರಾರಂಭಗೊಂಡಿವೆ. ಭಾನುವಾರದ ವೇಳೆ ಉಳಿದ ಯಂತ್ರಗಳು ಕಾರ್ಯಾರಂಭ ಮಾಡುವ ವಿಶ್ವಾಸವಿದೆ. ನೀರು ಶುದ್ದೀಕರಣ ಯಂತ್ರದ ನಿರ್ವಹಣೆಗು ತಜ್ಞರೊಬ್ಬರು ಬರಲಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಶಿಧರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next