Advertisement

ಮಧುಮೇಹ: ಔಷಧ ಚಿಕಿತ್ಸೆ

06:00 AM Dec 10, 2017 | |

5. ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌  IV
 (ಡಿಪಿಪಿ-4)  ಇನ್‌ಹಿಬಿಟರ್

ಡೈಪೆಪ್ಟೆ„ಡಿಲ್‌ ಪೆಪ್ಟಿಡೇಸ್‌ 4 (ಡಿಪಿಪಿ4) ಒಂದು ಜೀವಕೋಶ ಭಿತ್ತಿಯ ಪ್ರೊಟೀನ್‌ ಆಗಿದ್ದು, ಜಿಎಲ್‌ಪಿ-1 ಮತ್ತು ಗ್ಲುಕೋಸ್‌ ಅವಲಂಬಿ ಇನ್ಸುಲಿನೊಟ್ರೋಪಿಕ್‌ ಪಾಲಿಪೆಪ್ಟೆ„ಡ್‌ಗಳನ್ನು ಕ್ಷಿಪ್ರವಾಗಿ ದುರ್ಬಲಗೊಳಿಸುತ್ತದೆ. ಡಿಪಿಪಿ 4 ನಿಗ್ರಹವು ಇನ್ಸುಲಿನ್‌ ಸ್ರಾವ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಗ್ಲುಕಗೋನ್‌ ಸ್ರಾವದ ಗ್ಲುಕೋಸ್‌ ಅವಲಂಬಿ ವಿಧಾನದ ನಿಗ್ರಹಕ್ಕೆ ಕಾರಣವಾಗುತ್ತದೆ. 

Advertisement

ಸಾಮಾನ್ಯವಾಗಿ ಬಳಕೆಯಲ್ಲಿರುವ ಗ್ಲಿಪ್ಟಿನ್‌ಗಳೆಂದರೆ, ಸಿಟಾಗ್ಲಿಪ್ಟಿನ್‌, ವಿಲ್ಡಾಗ್ಲಿಪ್ಟಿನ್‌, ಸಕ್ಸಾಗ್ಲಿಪ್ಟಿನ್‌ ಮತ್ತು ಲಿನಾಗ್ಲಿಪ್ಟಿನ್‌. ಸಿಟಾಗ್ಲಿಪ್ಟಿನ್‌ನ ಡೋಸೇಜ್‌ ದಿನಕ್ಕೊಮ್ಮೆ ಮೌಖೀಕವಾಗಿ 100 ಎಂಜಿ, ಸಕ್ಸಾಗ್ಲಿಪ್ಟಿನ್‌ – ಮೌಖೀಕವಾಗಿ ದಿನಕ್ಕೊಮ್ಮೆ 2.5ರಿಂದ 5 ಎಂಜಿ; ಲಿನಾಗ್ಲಿಪ್ಟಿನ್‌-ದಿನಕ್ಕೊಮ್ಮೆ ಮೌಖೀಕವಾಗಿ 5 ಎಂಜಿ ಮತ್ತು ವಿಲ್ಡಾಗ್ಲಿಪ್ಟಿನ್‌- ದಿನಕ್ಕೆ ಎರಡು ಬಾರಿ 50 ಎಂಜಿ. ಮೂತ್ರಪಿಂಡ ವೈಫ‌ಲ್ಯಕ್ಕೆ ಒಳಗಾಗಿರುವವರಲ್ಲಿ ಲಿನಾಗ್ಲಿಪ್ಟಿನ್‌ನ ಡೋಸೇಜ್‌ ಹೊಂದಾಣಿಕೆ ಮಾಡಬೇಕಾದ ಅಗತ್ಯವಿಲ್ಲ.

6. ಸೆಲೆಕ್ಟಿವ್‌ ಸೋಡಿಯಂ – 
ಗ್ಲುಕೊಸೆಟ್ರಾನ್ಸ್‌ ಪೋರ್ಟರ್‌-2 
(ಎಸ್‌ಜಿಎಲ್‌ಟಿ-2)  ಇನ್‌ಹಿಬಿಟರ್ 

ಎಸ್‌ಜಿಎಲ್‌ಟಿ-2 ಇನ್‌ಹಿಬಿಟರ್ ಟೈಪ್‌ -2 ಮಧುಮೇಹಕ್ಕೆ ಔಷಧಿಯಾಗಿ ಎಫ್ಡಿಎಯಿಂದ ಹೊಸದಾಗಿ ಅಂಗೀಕೃತವಾಗಿರುವ ಔಷಧ ಸಮೂಹವಾಗಿದೆ. ಎಸ್‌ಜಿಎಲ್‌ಟಿ-2 ಒಂದು ಪ್ರೊಟೀನ್‌ ಆಗಿದ್ದು, ಮೂತ್ರಪಿಂಡಗಳ ಪ್ರಾಕ್ಸಿಮಲ್‌ ಟ್ಯೂಬ್ಯೂಲ್‌ಗ‌ಳಲ್ಲಿ ಸೋಡಿಯಂ -ಗ್ಲುಕೋಸ್‌ ಸಹ ರವಾನೆದಾರನಾಗಿ ಕೆಲಸ ಮಾಡುತ್ತದೆ. ಪ್ರಾಕ್ಸಿಮಲ್‌ ಟ್ಯೂಬ್ಯೂಲ್‌ಗ‌ಳ ಪ್ರಧಾನ ಕೆಲಸವು ಮೂತ್ರಕ್ಕೆ ಶೋಧಿಸಲ್ಪಟ್ಟ ಗ್ಲುಕೋಸನ್ನು ಅಲ್ಲಿಂದ ಪುನರಪಿ ಹೀರಿಕೊಂಡು ರಕ್ತಪ್ರವಾಹಕ್ಕೆ ಸೇರಿಸುವುದು. ಶೇ.90ರಷ್ಟು ಗ್ಲುಕೋಸ್‌ ಪುನರಪಿ ಹೀರಿಕೆಯನ್ನು ಇದು ನಡೆಸುತ್ತದೆ. ಈ ಪ್ರೊಟೀನ್‌ನ ನಿರ್ಬಂಧವು ಮೂತ್ರದಲ್ಲಿ ಗ್ಲುಕೋಸ್‌ ವಿಸರ್ಜನೆಗೆ ಮತ್ತು ರಕ್ತದಲ್ಲಿ ಸಹಜಕ್ಕಿಂತ ಕಡಿಮೆ ಗ್ಲುಕೋಸ್‌ ಮಟ್ಟ (180 ಎಂಜಿ/ಡಿಎಲ್‌ಗೆ ಬದಲಾಗಿ ಸುಮಾರು 120 ಎಂಜಿ/ಡಿಎಲ್‌)ಕ್ಕೆ ಕಾರಣವಾಗುತ್ತದೆ. 

ಎಸ್‌ಜಿಎಲ್‌ಟಿ-2 ಇನ್‌ಹಿಬಿಟರ್ಗಳ ಸರ್ವೇಸಾಧಾರಣ ಅಡ್ಡ ಪರಿಣಾಮವೆಂದರೆ, ಯೋನಿಯಲ್ಲಿ ಶಿಲೀಂಧ್ರ ಸೋಂಕು ಮತ್ತು ಮೂತ್ರಾಂಗ ವ್ಯೂಹ ಸೋಂಕುಗಳು. ಅಡ್ಡಪರಿಣಾಮಗಳ ಅತಿ ಹೆಚ್ಚು ಅಪಾಯವನ್ನು ಸ್ತ್ರೀರೋಗಿಗಳು ಹಾಗೂ ಶಿಶ°ದ ಮುಂದೊಗಲು ತೆಗೆದುಹಾಕಲ್ಪಟ್ಟ ಪುರುಷ ರೋಗಿಗಳು ಹೊಂದಿರುತ್ತಾರೆ. ಪಾಲಿಯೂರಿಯಾ ಕೂಡ ಉಂಟಾಗಬಹುದು. ತೂಕ ನಷ್ಟ (ತೂಕನಷ್ಟದ ಮೂರನೇ ಎರಡು ಕೊಬ್ಬಿನ ಜೀವಕೋಶಗಳ ನಷ್ಟದಿಂದ ಮತ್ತು ಮೂರನೇ ಒಂದು ದ್ರವಾಂಶ ನಷ್ಟದಿಂದ ಉಂಟಾಗುತ್ತದೆ) ಮತ್ತು ಕಡಿಮೆ ರಕ್ತದೊತ್ತಡಗಳು ಈ ಔಷಧಿಗಳ ಹೆಚ್ಚುವರಿ ಪ್ರಯೋಜನಗಳಾಗಿವೆ.

ಈ ಔಷಧಿಗಳನ್ನು ಮಕ್ಕಳಿಗೆ, ಟೈಪ್‌-1 ಮಧುಮೇಹ ರೋಗಿಗಳಿಗೆ, ರಕ್ತ ಅಥವಾ ಮೂತ್ರದಲ್ಲಿ ಆಗಾಗ ಕೀಟೋನ್‌ ಹೊಂದಿರುವವರಿಗೆ ಅಥವಾ ತೀವ್ರ ಮೂತ್ರಪಿಂಡ ಸಮಸ್ಯೆ ಹೊಂದಿರುವವರಿಗೆ ಸೂಚಿಸಲಾಗುವುದಿಲ್ಲ. ಮೂತ್ರದಲ್ಲಿ ಗ್ಲುಕೋಸ್‌ ಕಾಣಿಸಿಕೊಳ್ಳುವುದನ್ನು ರೋಗಿಗಳಿಗೆ ಸೂಚಿಸಬೇಕು; ಹೀಗಾಗಿ ಯೂರಿನ್‌ ಗ್ಲುಕೋಸ್‌ ಸ್ಟ್ರಿಪ್‌ಗ್ಳು ಸಾಮಾನ್ಯವಾಗಿ ಪಾಸಿಟಿವ್‌ ರೀಡಿಂಗ್‌ ತೋರಿಸುತ್ತವೆ. ಪ್ರಸ್ತುತ ಮೂರು ಎಸ್‌ಜಿಎಲ್‌ಟಿ-2 ಇನ್‌ಹಿಬಿಟರ್‌ಗಳು ಲಭ್ಯವಿವೆ – ಕನಾಗ್ಲಿಫ್ಲೋಝಿನ್‌, ಡಪಾಗ್ಲಿಫ್ಲೋಝಿನ್‌ ಮತ್ತು ಎಂಪಾಗ್ಲಿಫ್ಲೋಝಿನ್‌.

Advertisement

ಕನಾಗ್ಲಿಫ್ಲೋಝಿನ್‌ನ್ನು ದಿನದ ಮೊತ್ತಮೊದಲ ಆಹಾರ ಸೇವನೆಗೆ ಮುನ್ನ 100 ಎಂಜಿ/ದಿನ ಪ್ರಮಾಣದಲ್ಲಿ ನೀಡಲಾಗುತ್ತದೆ ಮತ್ತು, ಸ್ವೀಕೃತವಾದರೆ 300 ಎಂಜಿ/ದಿನಕ್ಕೆ ಹೆಚ್ಚಿಸಬಹುದಾಗಿದೆ. ಕನಾಗ್ಲಿಫ್ಲೋಝಿನ್‌ನ್ನು ಇಜಿಎಫ್ಆರ್‌ 45ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕಡಿಮೆ ಇರುವ ರೋಗಿಗಳಿಗೆ ಉಪಯೋಗಿಸಬಾರದು ಮತ್ತು ಇಜಿಎಫ್ಆರ್‌ 45ರಿಂದ 60 ಎಂಎಲ್‌/ನಿಮಿಷ/1.73ಎಂ2 ಇರುವ ರೋಗಿಗಳಿಗೆ 100 ಎಂಜಿಗೆ ಮಿತಗೊಳಿಸಬೇಕು.

ಡಪಾಗ್ಲಿಫ್ಲೋಝಿನ್‌ನ್ನು 5 ಎಂಜಿ/ದಿನ ಡೋಸ್‌ ನೀಡಲಾಗುತ್ತದೆ ಮತ್ತು ಸ್ವೀಕೃತವಾದರೆ 10 ಎಂಜಿ/ದಿನಕ್ಕೆ ಹೆಚ್ಚಿಸಬಹುದಾಗಿದೆ. ಇದನ್ನು ಇಜಿಎಫ್ಆರ್‌ 60 ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕಡಿಮೆ ಇದ್ದರೆ ಉಪಯೋಗಿಸಬಾರದು. 

ಎಂಪಾಗ್ಲಿಫ್ಲೋಝಿನ್‌ನ್ನು ದಿನಕ್ಕೊಮ್ಮೆ 10 ಅಥವಾ 25 ಎಂಜಿ ಡೋಸ್‌ನಲ್ಲಿ ನೀಡಲಾಗುತ್ತದೆ. ಇಜಿಎಫ್ಆರ್‌ ಇಜಿಎಫ್ಆರ್‌ 60 ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕಡಿಮೆ ಇದ್ದರೆ ಇದನ್ನು ಆರಂಭಿಸಬಾರದು. ಈ ಔಷಧಿಯನ್ನು ಉಪಯೋಗಿಸುತ್ತಿರುವಾಗ ಇಜಿಎಫ್ಆರ್‌ 60 ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕೆಳಕ್ಕೆ ಕುಸಿದರೆ ಔಷಧಿಯನ್ನು 10 ಎಂಜಿ/ದಿನ ಡೋಸ್‌ನಲ್ಲಿ ಮುಂದುವರಿಸಬಾರದು ಹಾಗೂ ಇಜಿಎಫ್ಆರ್‌ 45ಎಂಎಲ್‌/ನಿಮಿಷ/1.73 ಎಂ2ಕ್ಕಿಂತ ಕೆಳಕ್ಕೆ ಕುಸಿದರೆ ಸ್ಥಗಿತಗೊಳಿಸಬೇಕು. ಪ್ರಸ್ತುತ ಎಂಪಾಗ್ಲಿಫ್ಲೋಝಿನ್‌ ಮಾತ್ರ ಟೈಪ್‌2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಹೃದ್ರೋಗಗಳ ಅಪಾಯವನ್ನು ತಗ್ಗಿಸುವ ಮಧುಮೇಹ ನಿರೋಧಕ ಔಷಧಿಯಾಗಿದೆ. 

ಇನ್ಸುಲಿನ್‌
ಮಧುಮೇಹಕ್ಕೆ ಲಭ್ಯವಿರುವ ಅತಿ ಹಳೆಯ ಔಷಧಿ ಚಿಕಿತ್ಸೆ ಇನ್ಸುಲಿನ್‌. 1921ರಲ್ಲಿ ಇದನ್ನು ಕಂಡುಹಿಡಿಯಲಾಯಿತು, 1922ರಲ್ಲಿ ಮನುಷ್ಯರಲ್ಲಿ ಇದರ ಪ್ರಾಯೋಗಿಕ ಪರೀಕ್ಷೆಯನ್ನು ಆರಂಭಿಸಲಾಯಿತು. ಇವತ್ತಿಗೂ ಹೈಪರ್‌ಗ್ಲೆ„ಸೇಮಿಯಾ (ರಕ್ತದಲ್ಲಿ ಗುÉಕೋಸ್‌ ಆಧಿಕ್ಯ)ವನ್ನು ಕಡಿಮೆ ಮಾಡುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿ ಇದು ಚಾಲ್ತಿಯಲ್ಲಿದೆ. ಇದರ ಔಷಧೀಯ ಪರಿಣಾಮಕ್ಕೆ ಮೇಲಿ¾ತಿ ಎಂಬುದಿಲ್ಲ. ಹೈಪೊಗ್ಲೆ„ಸೇಮಿಯಾ ಇದರ ಪ್ರಮುಖ ಅಡ್ಡ ಪರಿಣಾಮವಾಗಿದೆ.

ಗ್ಲೆ„ಸೇಮಿಯಾ 
ನಿರ್ವಹಣೆಯ ಪ್ರವೇಶ

ಗ್ಲೆ„ಸೇಮಿಯಾ ನಿರ್ವಹಣೆಯ ಲೆಕ್ಕಾಚಾರವು ಯಾವುದೇ ಸಹವರ್ತಿ ಅನಾರೋಗ್ಯಗಳಿಲ್ಲದ ಮತ್ತು ಹೈಪೊಗ್ಲೆ„ಸೇಮಿಯಾ ಅಪಾಯ ಕಡಿಮೆ ಇರುವ ಆರೋಗ್ಯವಂತ ವ್ಯಕ್ತಿಗಳಿಗೆ ಶೇ.6.5 ಅಥವಾ ಅದಕ್ಕಿಂತ ಕಡಿಮೆ ಎಚ್‌ಬಿಎ1ಸಿಯನ್ನು ಶಿಫಾರಸು ಮಾಡುತ್ತದೆ. ಆದರೆ, ಸಹವರ್ತಿ ಅನಾರೋಗ್ಯಗಳಿರುವ ಮತ್ತು ಹೈಪೊಗ್ಲೆ„ಸೇಮಿಯಾ ಅಪಾಯ ಹೆಚ್ಚು ಇರುವ ವ್ಯಕ್ತಿಗಳಿಗೆ ವ್ಯಕ್ತಿಗತವಾಗಿ ಎಚ್‌ಬಿಎ1ಸಿ ಮೌಲ್ಯದ ಗುರಿಯನ್ನು ಶೇ.6.5ಕ್ಕಿಂತ ಹೆಚ್ಚು ಇರಿಸಿಕೊಳ್ಳಲಾಗುತ್ತದೆ. ತೂಕನಷ್ಟದ ಸಹಿತ ಜೀವನಶೈಲಿ ಬದಲಾವಣೆ ಎಲ್ಲ ಚಿಕಿತ್ಸೆಗಳ ಭಾಗವಾಗಿರುತ್ತದೆ. ಏಕಚಿಕಿತ್ಸೆಯ ಆರಂಭದಲ್ಲಿ ಮೆಟಮಾರ್ಫಿನ್‌ಗೆ ಆದ್ಯತೆ ನೀಡಲಾಗುತ್ತಿದ್ದು, ಅದು ಸಂಯೋಜಿತ ಚಿಕಿತ್ಸೆಗಳ ಆದರ್ಶ ಭಾಗವಾಗಿರುತ್ತದೆ.

ದ್ವಿ ಔಷಧಿ ಚಿಕಿತ್ಸೆ
ಗ್ಲೆ„ಸೇಮಿಕ್‌ ಗುರಿ ಸಾಧಿತವಾಗ ದಿದ್ದಲ್ಲಿ ಅಥವಾ 2-3 ತಿಂಗಳುಗಳಲ್ಲಿ ಮೊದಲಿದ್ದ ಪ್ರಮಾಣ ಮರುಕಳಿಸಿದಲ್ಲಿ ಇನ್ನೊಂದು ಔಷಧಿಯನ್ನು ಸೇರ್ಪಡೆಗೊಳಿಸಬೇಕು. ದ್ವಿತೀಯ ಔಷಧಿಯ ಆಯ್ಕೆಯೂ ರೋಗಿಯ ಆರೋಗ್ಯ ಸ್ಥಿತಿಗತಿ ಮತ್ತು ಒಳಗೊಳ್ಳುವಿಕೆ (ಉದಾಹರಣೆಗೆ, ಖಾಲಿ ಹೊಟ್ಟೆಯಲ್ಲಿ ಮತ್ತು ಆಹಾರ ಸೇವನೆಯ ಬಳಿಕದ ಗುÉಕೋಸ್‌ ಮಟ್ಟಗಳೆರಡೂ ಹೆಚ್ಚಿದ್ದರೆ ಡಿಪಿಪಿ-4 ಇನ್‌ಹಿಬಿಟರ್‌, ಆಹಾರ ಸೇವನೆಯ ಬಳಿಕದ ಗುÉಕೋಸ್‌ ಮಟ್ಟ ತೀವ್ರವಾಗಿ ಏರಿದ್ದರೆ ಜಿಎಲ್‌ಪಿ-1 ಅಗನಿಸ್ಟ್‌, ರೋಗಿ ಯಾವುದಾದರೂ ಮೆಟಬಾಲಿಕ್‌ ಸಿಂಡ್ರೋಮ್‌ ಅಥವಾ/ಮತ್ತು ಮೊನಾಕೊಹೊಲಿಕ್‌ ಫ್ಯಾಟಿ ಲಿವರ್‌ ಕಾಯಿಲೆ ಹೊಂದಿದ್ದರೆ ಟಿಝಡ್‌ಡಿ) ಯನ್ನು ಪರಿಗಣಿಸಿ ವ್ಯಕ್ತಿಗತಗೊಂಡಿರಬೇಕು. ಇನ್ಸುಲಿನ್‌ ಸೆಕ್ರೆಟಗಾಗ್‌ ತೆಗೆದುಕೊಳ್ಳುತ್ತಿರುವ ರೋಗಿಗೆ ದ್ವಿತೀಯ ಔಷಧಿಯನ್ನು ನೀಡುವುದಕ್ಕೆ ಮುನ್ನ ವೈದ್ಯರು ಅಥವಾ ಆರೋಗ್ಯ ಸೇವಾದಾರರು ಹೈಪೊಗ್ಲೆ„ಸೇಮಿಯಾ ಉಂಟಾಗುವ ಸಂಭಾವ್ಯತೆಯ ಬಗ್ಗೆ ಎಚ್ಚರಿಕೆ ನೀಡಬೇಕು. 

ತ್ತೈ ಔಷಧಿ ಚಿಕಿತ್ಸೆ
ಎರಡು ಔಷಧಿಗಳ ಪ್ರಯೋಗ 2-3 ತಿಂಗಳುಗಳ ಬಳಿಕ ಪರಿಣಾಮಕಾರಿಯಾಗಿಲ್ಲ ಎಂಬುದಾಗಿ ಶ್ರುತಪಟ್ಟರೆ, ಮುಂದಿನ ಹೆಜ್ಜೆ ತ್ತೈಔಷಧಿ ಚಿಕಿತ್ಸೆ. ಮೂರನೆಯ ಔಷಧಿಯು ಮಧುಮೇಹ ನಿರೋಧಕ ಔಷಧಿಗಳ ತೃತೀಯ ವರ್ಗದ್ದಾಗಿರಬಹುದು ಅಥವಾ ಬೇಸಲ್‌ ಇನ್ಸುಲಿನ್‌ (ಸಾಮಾನ್ಯವಾಗಿ ಮಲಗುವ ಸಮಯಕ್ಕೆ ತೆಗೆದುಕೊಳ್ಳುವಂಥದ್ದು) ಆಗಿರುತ್ತದೆ.

ಇನ್ಸುಲಿನ್‌ ಚಿಕಿತ್ಸೆ
ಟೈಪ್‌ 1 ಮಧುಮೇಹ ಸಂದರ್ಭದಲ್ಲಿ, ಇನ್ಸುಲಿನ್‌ ಒಂದೇ ಲಭ್ಯ ಚಿಕಿತ್ಸೆಯಾಗಿರುತ್ತದೆ. ಆದರೆ ಟೈಪ್‌ 2 ಮಧುಮೇಹದ ಸಂದರ್ಭದಲ್ಲಿ, ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧಿಗಳ ಸೇವನೆಯ ಬಳಿಕವೂ ಗ್ಲೆ„ಸೇಮಿಕ್‌ ಗುರಿಯನ್ನು ರೋಗಿ ಸಾಧಿಸದಾಗ ಇನ್ಸುಲಿನ್‌ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು. ಚಿಕಿತ್ಸೆಯಿಂದ ಸಲೊ#àನಿಯೂರಿಯಾಸ್‌ ಅನ್ನು ವರ್ಜಿಸುವುದು ವಿಹಿತ, ಬಳಿಕ ರೋಗಿಗೆ ಇನ್ಸುಲಿನ್‌ ಚಿಕಿತ್ಸೆಯನ್ನು ಅಳವಡಿಸಬೇಕು. ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ತೊಡೆ, ಪೃಷ್ಠ ಅಥವಾ ಸೊಂಟ ಭಾಗದಲ್ಲಿ ಚುಚ್ಚಬಹುದಾದರೂ ಎಲ್ಲ ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ಹೊಟ್ಟೆಗೆ ಚುಚ್ಚುವುದು ವಿಹಿತ.

ದೈನಿಕ ಬಹು ಡೋಸಿಂಗ್‌
ಇನ್ಸುಲಿನ್‌ನ ದೈನಿಕ ಬಹು ಡೋಸಿಂಗ್‌ ರೋಗಿಗೆ ಅತಿಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತದೆ. ದೀರ್ಘ‌ಕಾಲ ಕ್ರಿಯಾಶೀಲವಾದ ಇನ್ಸುಲಿನ್‌ (ಉದಾಹರಣೆಗೆ, ಗ್ಲಾರ್ಗಿನ್‌, ಡೆಟೆಮಿರ್‌ ಅಥವಾ ಎನ್‌ಪಿಎಚ್‌) ಅನ್ನು ಸಾಮಾನ್ಯವಾಗಿ ದಿನಕ್ಕೊಮ್ಮೆ ಬೇಸಲ್‌ ಇನ್ಸುಲಿನ್‌ ಆಗಿ ಮತ್ತು ಕ್ಷಿಪ್ರ ಕ್ರಿಯಾಶೀಲ ಇನ್ಸುಲಿನ್‌ (ಉದಾಹರಣೆಗೆ, ಅಸ್ಪಾರ್ಟ್‌, ಗುÉಲಿಸಿನ್‌, ಲಿಸೊø ಅಥವಾ ರೆಗ್ಯುಲರ್‌) ಅನ್ನು ಪ್ರತೀ ಊಟಕ್ಕೆ ಮುನ್ನ ನೀಡಬೇಕು. 

ದಿನಕ್ಕೆರಡು ಬಾರಿ 
ಪೂರ್ವಮಿಶ್ರಿತ ಇನ್ಸುಲಿನ್‌ 

ಪೂರ್ವಮಿಶ್ರಿತ (ಪ್ರಿಮಿಕ್ಸ್‌) ಇನ್ಸುಲಿನ್‌ ಇಂಜೆಕ್ಷನ್‌ ಅನ್ನು ಬೆಳಗಿನ ಉಪಾಹಾರಕ್ಕೆ ಮುನ್ನ ರಾತ್ರಿಯೂಟಕ್ಕೆ ಮುನ್ನ ನೀಡಲಾಗುತ್ತದೆ. ಈ ಔಷಧಿ ಚಿಕಿತ್ಸೆಯು ಬಹು ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ರೋಗಿಗಳಿಗೆ ಸೂಕ್ತ. 

ಮಾಂಸಖಂಡಗಳ ಕೆಳಗೆ ಸತತ ಇನ್ಸುಲಿನ್‌ ಊಡಿಕೆ (ಸಿಎಸ್‌ಐಐ) ಅಥವಾ ಇನ್ಸುಲಿನ್‌ ಪಂಪ್‌ ಚಿಕಿತ್ಸೆ
ಟೈಪ್‌ 1 ಮಧುಮೇಹ ಹೊಂದಿರುವ ಅಥವಾ ದಿನಕ್ಕೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ಪಡೆಯುತ್ತಿರುವ ಮತ್ತು ದಿನಕ್ಕೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ರಕ್ತದ ಗುÉಕೋಸ್‌ ಪರಿಶೀಲನೆಯನ್ನು ಸ್ವಯಂ ನಡೆಸುತ್ತಿರುವ; ಪ್ರಶಸ್ತ ರಕ್ತ ಗುÉಕೋಸ್‌ ನಿಯಂತ್ರಣ ಸಾಧಿಸಲು ಪ್ರೇರಣೆ ಹೊಂದಿರುವ, ಈ ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುವ ಚಿಕಿತ್ಸೆಯ ವಿಧಿವಿಧಾನಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ಒಲವು ಮತ್ತು ಸಾಮರ್ಥ್ಯವುಳ್ಳ ಹಾಗೂ ತನ್ನ ಆರೋಗ್ಯ ಸೇವಾದಾರ ತಂಡದ ಜತೆಗೆ ಸತತ ಸಂಪರ್ಕವನ್ನು ಇರಿಸಿಕೊಳ್ಳುವ ಒಲವುಳ್ಳ ಟೈಪ್‌ 2 ಮಧುಮೇಹ ರೋಗಿ ಸಿಎಸ್‌ಐಐ ಚಿಕಿತ್ಸೆಗೆ ಆದರ್ಶ ಅಭ್ಯರ್ಥಿಯಾಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next