Advertisement

Sandalwood; ಡಬ್ಬಿಂಗ್ ಮುಗಿಸಿದ ಧ್ರುವ ‘ಮಾರ್ಟಿನ್’

07:24 PM Mar 22, 2024 | Team Udayavani |

ಧ್ರುವ ಸರ್ಜಾ ನಾಯಕರಾಗಿರುವ “ಮಾರ್ಟಿನ್‌’ ಚಿತ್ರದ ಡಬ್ಬಿಂಗ್‌ ಪೂರ್ಣಗೊಂಡಿದ್ದು, ಇತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಚಿತ್ರತಂಡ ಬಿಝಿಯಾಗಿದೆ. ಶೀಘ್ರದಲ್ಲೇ ಚಿತ್ರದ ಮೊದಲ ಪ್ರತಿ ಬರಲಿದೆ. ಉದಯ್‌ ಕೆ ಮೆಹ್ತಾ ನಿರ್ಮಾಣದ ಈ ಚಿತ್ರವನ್ನು ಎ.ಪಿ.ಅರ್ಜುನ್‌ ನಿರ್ದೇಶಿಸಿದ್ದಾರೆ.

Advertisement

ಇನ್ನು, ಚಿತ್ರೀಕರಣದಲ್ಲೂ “ಮಾರ್ಟಿನ್‌’ ದಾಖಲೆ ಬರೆದಿದೆ. ಒಟ್ಟು 240 ದಿನಗಳ ಚಿತ್ರೀಕರಣ ನಡೆದಿದೆ. ಇನ್ನು ಚಿತ್ರದ ಆಡಿಯೋ ಹಕ್ಕನ್ನು ಅಧಿಕ ಮೊತ್ತ ನೀಡಿ ಜನಪ್ರಿಯ ಆಡಿಯೋ ಸಂಸ್ಥೆಯಾದ ಸರೆಗಮಪ ಪಡೆದುಕೊಂಡಿದೆ.

ಮಣಿ ಶರ್ಮ ಅವರ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ರವಿ ಬಸ್ರೂರ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ ಹಾಗೂ ರವಿವರ್ಮ, ರಾಮ್‌ ಲಕ್ಷ್ಮಣ್‌ ಅವರ ಸಾಹಸ ನಿರ್ದೇಶನವಿರುವ “ಮಾರ್ಟಿನ್‌’ ಚಿತ್ರದ ತಾರಾಬಳಗದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್‌, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್‌, ನಿಕ್ತಿನ್‌ ಧೀರ್‌, ನವಾಬ್‌ ಶಾ, ರೋಹಿತ್‌ ಪಾಠಕ್‌ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next