Advertisement

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

10:51 AM Apr 30, 2024 | Team Udayavani |

ಸಿನಿಮಾ ರಂಗವೇ ಹಾಗೆ. ಇಲ್ಲಿ ಇಂಟ್ರೊಡಕ್ಷನ್‌, ರೀ ಇಂಟ್ರೊಡಕ್ಷನ್‌, ಹೆಸರು ಬದಲಾವಣೆ.. ಎಲ್ಲವೂ ನಡೆಯುತ್ತಲೇ ಇರುತ್ತದೆ. ಈಗ ಕನ್ನಡದ ನವನಟನೊಬ್ಬ ರೀ ಇಂಟ್ರೋಡಕ್ಷನ್‌ಗೆ ಸಿದ್ಧರಾಗಿದ್ದಾರೆ. ಅದು ಬೇರಾರು ಅಲ್ಲ ಧೀರೇನ್‌ ರಾಮ್‌ಕುಮಾರ್‌.

Advertisement

ರಾಜ್‌ ಕುಟುಂಬದಿಂದ ಭರ್ಜರಿ ಕನಸು ಕಂಡ ಚಿತ್ರರಂಗಕ್ಕೆ ಬಂದ ಧೀರೇನ್‌ ಮೊದಲ ಬಾರಿಗೆ ನಟಿಸಿದ್ದು “ಶಿವ143′ ಸಿನಿಮಾದಲ್ಲಿ. ಆದರೆ, ಆ ಚಿತ್ರ ಮಾತ್ರ ದೊಡ್ಡ ಮಟ್ಟದಲ್ಲಿ ಧೀರೇನ್‌ ಕೈ ಹಿಡಿಯಲಿಲ್ಲ. 2022ರಲ್ಲಿ ಈ ಚಿತ್ರ ತೆರೆಕಂಡಿತ್ತು. ಆದರೆ, ಧೀರೇನ್‌ ಆ ಚಿತ್ರದ ಬಳಿಕ ಯಾವ ಚಿತ್ರವನ್ನು ಒಪ್ಪಿಕೊಂಡಂತಿಲ್ಲ. ಈಗ ರೀ ಇಂಟ್ರೊಡಕ್ಷನ್‌ಗೆ ರೆಡಿಯಾಗಿದ್ದಾರೆ.

ಕೆ.ಆರ್‌ .ಜಿ.ಸ್ಟುಡಿಯೋಸ್‌ ಧೀರೇನ್‌ ಅವರ ಮರುಪರಿಚಯದ ಜವಾಬ್ದಾರಿ ವಹಿಸಿಕೊಂಡಿದೆ. ಇನ್ನು ಧೀರೇನ್‌ ತಮ್ಮ ಹೆಸರಲ್ಲೂ ಒಂದು ಸಣ್ಣ ಬದಲಾವಣೆ ಮಾಡಿಕೊಂಡಿ ದ್ದಾರೆ. ಧೀರೇನ್‌ ರಾಮ್‌ಕುಮಾರ್‌ ಎಂದಿದ್ದ ತಮ್ಮ ಹೆಸರನ್ನು ಈಗ ಧೀರೇನ್‌ ಆರ್‌ ರಾಜ್‌ ಕುಮಾರ್‌ ಎಂದು ಮಾಡಿಕೊಂಡಿ ದ್ದಾರೆ. ಈ ಮೂಲಕ ಹೊಸ ಹೆಸರಿನೊಂದಿಗೆ ಅದೃಷ್ಟ ಪರೀಕ್ಷೆಗೆ ಅಣಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next