Advertisement

ಪೊಲೀಸರ ದಾಳಿ : 200 ಕೆಜಿ ಜಿಲಿಟಿನ್ ಕಡ್ಡಿ ವಶ

05:36 PM Mar 17, 2021 | Team Udayavani |

ಧಾರವಾಡ :  ಅಮ್ಮಿನಬಾವಿ ಗ್ರಾಮದ ಸ್ಟೋನ್ ಕ್ರಷರ್ ಮೇಲೆ ಪೊಲೀಸರು ದಾಳಿ ಮಾಡಿದ್ದು, 210 ಕೆಜಿ ಜಿಲೆಟಿನ್ ಕಡ್ಡಿ ವಶಪಡೆಸಿಕೊಂಡಿರುವುದಾಗಿ ಎಸ್.ಪಿ ಕೃಷ್ಣಕಾಂತ ಹೇಳಿದರು.

Advertisement

ಎಸ್.ಪಿ. ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಒಟ್ಟು 1650 ಜಿಲಿಟಿನ್ ಕಡ್ಡಿಗಳು ಹಾಗೂ 700 ಎಲೆಕ್ಟ್ರಾನಿಕ್ ಡಿಟೋನೇಟರ್ ಸಹ ಪತ್ತೆಯಾಗಿದ್ದು, ಇದು ಡಿ.ಬಿ.ಮಾಸೂರ ಕ್ರಷರ್ ಕಂಪನಿಯಾಗಿದೆ ಎಂದರು.

ಇವುಗಳನ್ನು ನೆಲದಲ್ಲಿ ಹೂತಿಟ್ಟಿದ್ದು ಖಚಿತ ಮಾಹಿತಿ ಮೇರೆಗೆ ಎರಡು ದಿನಗಳ ಹಿಂದೆ ದಾಳಿ ಮಾಡಲಾಗಿತ್ತು. 16,500 ರೂ. ಮೌಲ್ಯದ ಜಿಲೆಟಿನ್ ಕಡ್ಡಿಗಳು ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲೇಟಿನ್ ಮಾಲೀಕ ದಯಾನಂದ ಮಾಸೂರ, ಕ್ರಷರ್ ಸಿಬ್ಬಂದಿ ಶಂಕರಗೌಡ, ಹಾಗೂ ಜಿಲೆಟಿನ್ ಕಡ್ಡಿ ಕೊಟ್ಟಿದ್ದ ನವೀನಕುಮಾರ್ ಆರೋಪಿಗಳಾಗಿದ್ದು, ಶಂಕರಗೌಡನನ್ನು ಬಂಧಿಸಲಾಗಿದೆ ಎಂದರು. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next