Advertisement

ಧಾರವಾಡದ ಯುವಕನಿಗೆ ಸೋಂಕು ದೃಢ

09:08 PM Mar 22, 2020 | Lakshmi GovindaRaj |

ಧಾರವಾಡ: ಆಸ್ಟ್ರೇಲಿಯಾ, ದುಬೈ, ಮಸ್ಕತ್‌ ಹಾಗೂ ಗೋವಾ ಮೂಲಕ ನಗರಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ಪ್ರಯೋಗಾಲಯ ವರದಿಯಿಂದ ಧೃಢಪಟ್ಟಿದೆ. ಇಲ್ಲಿನ ಹೊಸ ಯಲ್ಲಾಪೂರ ಪ್ರದೇಶದ ನಿವಾಸಿಯಾಗಿರುವ ಈತ ಮಾ.12ರಂದು ವಿದೇಶ ಪ್ರವಾಸದಿಂದ ಮರಳಿದ್ದರು.

Advertisement

ಶಂಕಿತ ಕೋವಿಡ್‌-19 ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾ.18ರಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದೇ ದಿನ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ಇದೀಗ ಪ್ರಯೋಗಾಲಯ ವರದಿ ಕೋವಿಡ್‌-19 ಪಾಸಿಟಿವ್‌ ಎಂಬುದಾಗಿ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೊಸಯಲ್ಲಾಪುರ ಸುತ್ತಮುತ್ತ ಕಂಟೈನಮೆಂಟ್‌ ಪ್ರದೇಶ ಘೋಷಣೆ ಮಾಡಿದೆ. ಅಲ್ಲಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ, ನಿರ್ಗಮನ ನಿರ್ಬಂ ಧಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸಯಲ್ಲಾಪೂರದಲ್ಲಿ ಆತಂಕ: 33 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಧಾರವಾಡದ ಜನತೆ ಆತಂಕಕ್ಕೊಳಗಾಗಿದ್ದಾರೆ. ಹೊಸ ಯಲ್ಲಾಪೂರ ಅತ್ಯಂತ ಜನನಿಬಿಡವಾಗಿದ್ದು, ಮಾರುಕಟ್ಟೆಗೆ ಹತ್ತಿರದ ಪ್ರದೇಶವಾಗಿದೆ. ಅದೂ ಅಲ್ಲದೇ ಸೋಂಕು ತಗುಲಿದ ವ್ಯಕ್ತಿ ಮಾ.12 ರಿಂದ 18ರವರೆಗೂ ಧಾರವಾಡ ನಗರದಲ್ಲಿ ಸಂಚರಿಸಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next