ಬೆಳ್ತಂಗಡಿ: ಗ್ರಾಮಗಳ ಪ್ರಮುಖ ಭಾಗವಾಗಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛವಾಗಿಟ್ಟು ಕೊಂಡಲ್ಲಿ ಪರಿಸರ ಸ್ವಚ್ಛತೆಯ ಮನೋಭಾವ ಸಾರ್ವತ್ರಿಕವಾಗುತ್ತದೆ. ಇದಕ್ಕಾಗಿ ಜ. 7ರಿಂದ 13ರ ವರೆಗೆ ರಾಜ್ಯದ 201 ತಾಲೂಕುಗಳ 10,543 ಶ್ರದ್ಧಾ ಕೇಂದ್ರಗಳ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಜನ ಸಹ ಭಾಗಿತ್ವದಲ್ಲಿ ಅಭಿಯಾನ ನಡೆಯಲಿದೆ.
2,67,679 ಸ್ವಯಂಸೇವಕರು
ಕಳೆದ 6 ವಷ೯ಗಳಿಂದ ವಷì ಕ್ಕೆರಡು ಬಾರಿ (ಜ. 14 ಮತ್ತು ಆ. 15ರ ಸಂದರ್ಭ) ಸಪ್ತಾಹದ ಮೂಲಕ ಸ್ವಯಂ ಸೇವಕರು ದೇವಸ್ಥಾನ, ಬಸದಿ, ಮಸೀದಿ, ಚರ್ಚ್‌ಗಳ ಸ್ವಚ್ಛತೆಯನ್ನು ಕೈಗೊಳ್ಳುತ್ತಾರೆ. ಮಕರ ಸಂಕ್ರಾತಿ ಅಂದರೆ ಉತ್ತರಾಯಣ ಪುಣ್ಯ ಕಾಲ ಜನವರಿ 14ರ ಮೊದಲು ರಾಜ್ಯದ ಎಲ್ಲ ಶ್ರದ್ಧಾಕೇಂದ್ರಗಳು ಸ್ವಚ್ಛ ಹಾಗೂ ಪಾವಿತ್ರ್ಯದಿಂದ ಕೂಡಿರಬೇಕೆಂಬ ಉದ್ದೇಶದಿಂದ ಈ ಬಾರಿ 2,67,679 ಸ್ವಯಂ ಸೇವಕರು ಭಾಗವಹಿಸಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಗೊಳಿಸಲಿದ್ದಾರೆ ಎಂದರು.
ಇದನ್ನೂ ಓದಿ:ಸ್ಯಾಮ್‌ಸಂಗ್‌ನಿಂದ ಹೊಸ ಫೋನ್; ಪ್ರಸಕ್ತ ವರ್ಷದ ಮೊದಲ ಸ್ಮಾರ್ಟ್‌ಫೋನ್
Related Articles
-ಸ್ವಚ್ಛತಾ ಕಾರ್ಯದ ಜತೆಯಲ್ಲೇ ಸಾರ್ವಜನಿಕರಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
-ಶ್ರದ್ಧಾಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ವಸ್ತ್ರದ ಚೀಲ ಬಳಕೆಗೆ ಆದ್ಯತೆ
-ಜಾತ್ರೆ, ವಿಶೇಷ ಕಾರ್ಯಕ್ರಮದ ದಿನ ಸ್ವಚ್ಛತೆಗೆ ತಂಡ ರಚನೆ
-ತ್ಯಾಜ್ಯವನ್ನು ಎಸೆಯಲು ಬಿದಿರಿನ ಬುಟ್ಟಿ, ತಗಡಿನ ಡಬ್ಬ ಇಟ್ಟು ಕಸವನ್ನು ಅಲ್ಲಿಯೇ ಹಾಕುವಂತೆ ಸೂಚನಾ ಫಲಕ ಅಳವಡಿಕೆ