Advertisement
ತುಳಸಿ ವನಂ ಸಂಗೀತ ಸಂಯೋಜನೆಯ ‘ಭಜಮಾನಸಂ’ ಎಂಬ ಕೂಚುಪುಡಿ ಶೈಲಿಯ ವಿನಾಯಕ ಸ್ತುತಿಯ ನೃತ್ಯದಿಂದ ಈ ನೃತ್ಯಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಸ್ವಾಮಿ ದೀಕ್ಷಿತರು, ದಯಾನಂದ ಸರಸ್ವತಿ, ಸ್ವಾಮಿ ತಿರುನಾಳ, ಪುರಂದರದಾಸ, ದಯಾನಂದ ಸರಸ್ವತಿ, ಕನಕದಾಸರಂತಹ ಸಾಹಿತ್ಯ ದಿಗ್ಗಜರ ಹಾಡಿಗೆ ಗೆಜ್ಜೆಕಟ್ಟಿ ಪುಟಾಣಿ ಮಕ್ಕಳು ಹೆಜ್ಜೆ ಹಾಕಿದರು. ಮಹಾವಿಷ್ಣುವಿನ ದಶಾವತಾರದ ಪ್ರದರ್ಶನ ನೋಡುಗರ ಮೈ ರೋಮಾಂಚನಗೊಳಿಸಿತು. ತಲ್ಲಾಣ ನೃತ್ಯದೊಂದಿಗೆ ಭರತನಾಟ್ಯ ಸಂಪನ್ನಗೊಂಡಿತು.ಹದಿನೆಂಟು ಬಾಲ ಕಲಾವಿದರು ನೃತ್ಯ ಪ್ರದರ್ಶನ ನೀಡಿ ವೇದಿಕೆಯನ್ನು ದೇವತಾಗೃಹವೆಂದು ಭಾವಿಸಿ ನೃತ್ಯದಲ್ಲಿ ತಲ್ಲೀನರಾಗಿ ದೇವರಿಗೆ ಮತ್ತು ನೆರೆದ ಭಕ್ತರಿಗೆ ಪುಷ್ಪ ಅರ್ಚಿಸಿ ಕುಣಿತಕ್ಕೆ ಅಣಿ ಇಟ್ಟರು. ಭೂಮಿ ತಾಯಿಗಾಗುವ ಪಾದಾಘಾತಕ್ಕೆ ಕಲಾವಿದರು ಕ್ಷಮೆಯಾಚಿಸುತ್ತಾ ಕುಣಿಯುವ ಮೂಲಕ, ಗಣಪತಿ ಸ್ತುತಿಯೊಂದಿಗೆ ನೃತ್ಯಾರಂಭವಾಯಿತು. ವಿದ್ಯಾ, ಬುದ್ಧಿದಾತೆಯಾದ ಸರಸ್ವತಿಯ ಸ್ತುತಿದೇಹ, ಮನಸ್ಸುಗಳ ಅರಳಿಸುವ ವ್ಯಾಯಾಮರೂಪದ ನೃತ್ಯವಾದ ‘ಅಲರಿಪು’ ಪ್ರದರ್ಶನಗೊಂಡಿತು.
ಜತಿ ವಿನ್ಯಾಸದಜತಿಸ್ವರ ನೃತ್ಯಬಂಧ, ನಾಡದೇವಿ ಚಾಮುಂಡೇಶ್ವರಿಯ ಅವತಾರಗಳನ್ನು ಬಿಂಬಿಸುವ ನೃತ್ಯಗಳು ಕಲಾಭಿಮಾನಿಗಳ ಮನ ಮುಟ್ಟುವಂತೆ ನಡೆಯಿತು. ಶ್ರೀ ಕೃಷ್ಣನ ಬಾಲಲೀಲೆಗಳಾದ ಪೂತನೀ ಸಂಹಾರ, ಧೈರ್ಯ, ಸ್ಥೈರ್ಯ, ತುಂಟಾಟ ಮತ್ತು ಮಹಾಭಾರತದ ಗೀತೋಪದೇಶದ ‘ಪದವರ್ಣ’ವೆಂಬ ಅಭಿನಯ ನೋಡುಗರ ಮನಸೂರೆಗೊಂಡಿತ್ತು. ನಾಟ್ಯದೇವ ನಟರಾಜ ಪರಮೇಶ್ವರನ ಭಕ್ತರ ಮೇಲಿನ ಕರುಣೆ ಮತ್ತು ಶಿವ ಲೀಲೆಗಳನ್ನು ನೃತ್ಯದ ಮೂಲಕ ಮಾಡಿದ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಭರತನಾಟ್ಯದಲ್ಲಿ ಕೊನೆಯದಾಗಿ ನರ್ತಿಸುವ, ಸಾಹಿತ್ಯದಿಂದ ಕೂಡಿದ ‘ತಿಲ್ಲಾನ’ ನೃತ್ಯ ಶೈಲಿ ನೃತ್ಯ ಪ್ರದರ್ಶನಕ್ಕೆಮುಕ್ತಾಯ ಹಾಡಿತು.