Advertisement

ಧರ್ಮಸ್ಥಳ ಲಕ್ಷದೀಪೋತ್ಸವ ಸಂಪನ್ನ

10:47 PM Nov 27, 2019 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ಬುಧವಾರ ರಾತ್ರಿ ಅಪಾರ ಜನಸ್ತೋಮದ ಮಧ್ಯೆ ಗೌರಿಮಾರುಕಟ್ಟೆ ಉತ್ಸವ, ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು.

Advertisement

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆದ 6 ದಿನಗಳ ಭಕ್ತಿ, ಭಾವದ ಉತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಬಣ್ಣ, ಬಣ್ಣ ದೀಪಗಳು ಹಾಗೂ ಹೂಗಳಿಂದ ಅಲಂಕಾರಗೊಂಡಿದ್ದ ಬೆಳ್ಳಿ ರಥ, ಸ್ವರ್ಣ ಪಲ್ಲಕ್ಕಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೆರವಣಿಗೆ ಗೌರಿಮಾರುಕಟ್ಟೆ ಬಳಿ ಸಾಗಿತು.

ಮೊದಲ 4 ಉತ್ಸವಗಳು ಕ್ಷೇತ್ರದ ವತಿಯಿಂದ ನಡೆದರೆ, ಗೌರಿಮಾರುಕಟ್ಟೆ ಉತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ಕೈಗೊಂಡಿತು. ಪ್ರತಿ ಸುತ್ತಿನಲ್ಲೂ ಬಲಿ ಕಲ್ಲಿಗೆ ತೀರ್ಥ ಹಾಗೂ ಬಿಲ್ವಪತ್ರೆಯಿಂದ ಶುದ್ಧಿ ಮಾಡಲಾಯಿತು. ಉಡಿಕೆಯ ಸುತ್ತಿನ ನಂತರ ಕ್ಷೇತ್ರಫಲನಿಗೆ ಪೂಜೆ ಸಲ್ಲಿಸಿ ಡಾ. ಹೆಗ್ಗಡೆ ಅವರು ಹಾಗೂ ದೇವಾಲಯದ ಪ್ರತಿನಿಧಿಗಳು ಸ್ವಾಮಿಗೆ ಬಿಲ್ವಪತ್ರೆ ಅರ್ಪಿಸಿ ದರು. ಬಳಿಕ ಸ್ವಾಮಿಯನ್ನು ಸ್ವರ್ಣ ಪಲ್ಲಕ್ಕಿ ಯಲ್ಲಿ ಕೂರಿಸಲಾಯಿತು.

ಪಲ್ಲಕ್ಕಿ ಉತ್ಸವ ಬಳಿಕ ಬೆಳ್ಳಿರಥದ ಮೇಲೆ ಕೂರಿಸಲಾಯಿತು. ಭಕ್ತರಿಗೆ ಪ್ರಸಾದ ರೂಪವಾಗಿ ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿದ ಸುಗಮ ಸಂಗೀತ ಕಾರ್ಯಕ್ರಮದಲ್ಲೂ ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು. ಭಕ್ತರೇ ಸೇವಾ ರೂಪದಲ್ಲಿ ಅನ್ನದಾನ ಮಾಡುವುದು ದೀಪೋತ್ಸವದ ಕೊನೆಯ ದಿನದ ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next