Advertisement

ಧರ್ಮಸ್ಥಳ ಲಕ್ಷದೀಪೋತ್ಸವ: ಲಲಿತೋದ್ಯಾನ ಉತ್ಸವ

09:59 AM Nov 23, 2022 | Team Udayavani |

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಮೂರನೇ ದಿನದ ರಾತ್ರಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಭಗವಾನ್‌ ಶ್ರೀ ಮಂಜುನಾಥ ಸ್ವಾಮಿಗೆ ಲಲಿತೋದ್ಯಾನ ಉತ್ಸವ ಮತ್ತು ರಥೋತ್ಸವ ನೆರವೇರಿತು.

Advertisement

ಶ್ರೀ ಮಂಜುನಾಥ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿರಿಸಿ ಅಂಗಣದಲ್ಲಿ 16 ಸುತ್ತು ಪ್ರದಕ್ಷಿಣೆ, ಲಲಿತೋದ್ಯಾನಕ್ಕೆ ವಿಹಾರಕ್ಕೆ ಕರೆತಂದು ವಿಶೇಷ ಪೂಜೆ ಬಳಿಕ ರಥೋತ್ಸವದೊಂದಿಗೆ ಲಲಿತೋದ್ಯಾನ ಉತ್ಸವ ಪೂರ್ಣಗೊಂಡಿತು. ನ. 22ರಂದು ರಾತ್ರಿ ಕಂಚಿಮಾರುಕಟ್ಟೆ ಉತ್ಸವ ನೆರವೇರಿತು.

ಲಲಿತಕಲಾ ಗೋಷ್ಠಿ
ಅಮೃತವರ್ಷಿಣಿ ಸಭಾಭವನದಲ್ಲಿ ನ. 21ರಂದು ಸಂಜೆ ಲಲಿತಕಲಾಗೋಷ್ಠಿ ನಡೆಯಿತು. ನಾಗಸ್ವರವಾದನ, ಉಡುಪಿಯ ಭಾರ್ಗವಿ ಆರ್ಟ್ಸ್ ಮತ್ತು ಡ್ಯಾನ್ಸ್‌ ಅಕಾಡೆಮಿಯವರಿಂದ ಭಾವ-ಯೋಗ-ಗಾನ-ನೃತ್ಯ ಪ್ರದರ್ಶನ, ರಾತ್ರಿ ಹಾಸನದ ವಿದ್ವಾನ್‌ ಉನ್ನತ್‌ ಎಚ್‌.ಆರ್‌. ಮತ್ತು ತಂಡ ನಾಟ್ಯ ಕಲಾನಿವಾಸ್‌ ಅವರಿಂದ ಸ್ವಾತಿ ತಿರುನಾಳರ “ಭಾವಯಾಮಿ ರಘುರಾಮಂ’ ರಾಮಾಯಣ ಪ್ರಸ್ತುತಿ ನಡೆಯಿತು.

ನ. 24: ಸಮವಸರಣ ಪೂಜೆ
ನ. 24ರಂದು ಸಂಜೆ ಗಂಟೆ 6ರಿಂದ ನೆಲ್ಯಾಡಿ ಬೀಡು ಬಳಿಯ ಬಸದಿಯಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ಮೂಡುಬಿದಿರೆಯ ಬೆಟೆRàರಿಯ ಲೇಖಕಿ ವೀಣಾ ರಘುಚಂದ್ರ ಶೆಟ್ಟಿ ಅವರಿಗೆ ಗೌರವ, ಪುಷ್ಪದಂತ ಭೂತಬಲಿ ವಿರಚಿತ ಸಿದ್ಧಾಂತ ಚಿಂತಾಮಣಿ ಕೃತಿಯ ಬಿಡುಗಡೆ ನಡೆಯಲಿದೆ. ಇದರೊಂದಿಗೆ ಐದು ದಿನಗಳ ಲಕ್ಷದೀಪೋತ್ಸವ ಸಂಪನ್ನಗೊಳ್ಳಲಿದೆ.

ಇಂದು ಸಾಹಿತ್ಯ ಸಮ್ಮೇಳನ
ನ. 23ಂದು ಸಂಜೆ 5 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಬೆಂಗಳೂರು ಉದ್ಘಾಟಿಸುವರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ವಿದ್ವಾನ್‌ ಡಾ| ಎಚ್‌.ವಿ. ನಾಗರಾಜ ರಾವ್‌ ಮೈಸೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಬೆಂಗಳೂರು ಸತ್ಯೇಶ್‌ ಎನ್‌. ಬೆಳ್ಳೂರು, ಪತ್ರಕರ್ತ ರವೀಂದ್ರ ಭಟ್‌ ಐನಕೈ, ತುಮಕೂರು ಕನ್ನಡ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕ ಡಾ| ಗೀತಾ ವಸಂತ ಉಪನ್ಯಾಸ ನೀಡಲಿದ್ದಾರೆ.

Advertisement

ಸಂಗೀತ ನೃತ್ಯ ವೈವಿಧ್ಯ
ಸಂಜೆ 5.30ರಿಂದ 6.30ರ ವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಮಡಿಕೇರಿಯ ಮೇಘಾ ಭಟ್‌ ಅವರಿಂದ ಶಾಸ್ತ್ರೀಯ ಸಂಗೀತ, 6.30ರಿಂದ 7.30ರ ವರೆಗೆ ಅಪೂರ್ವ ಅನಿರುದ್ಧ ಬೆಂಗಳೂರು ಅವರಿಂದ ವೀಣಾ ವಾದನ, 7.30ರಿಂದ 8.30ರ ವರೆಗೆ ವಿ. ರಜನಿ ಎಲ್‌. ಕರಿಗಾರ, ಕಾಣೆಬೆನ್ನೂರು ಅವರಿಂದ ಹಿಂದುಸ್ಥಾನಿ ಸಂಗೀತ, 8.30ರಿಂದ 10ರ ವರೆಗೆ ಪುತ್ತೂರು ನೃತ್ಯೋಪಸನಾ ಕಲಾಕೇಂದ್ರದ ವಿದುಷಿ ಶಾಲಿನಿ ಆತ್ಮಭೂಷಣ್‌ ಮತ್ತು ತಂಡದವರಿಂದ ಸಮೂಹ ನೃತ್ಯ, 10ರಿಂದ 11.30ರ ವರೆಗೆ ಭದ್ರಾವತಿಯ ಪ್ರೀತಮ್‌ ಮೆಲೋಡಿಯ ಶಂಕರ್‌ ಬಾಬು ಅವರಿಂದ ರಸಮಂಜರಿ ನಡೆಯಲಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 8.30ರಿಂದ ಬಹು-ಗ್ರಾÂಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಅರ್ಥ್ ಡೇ ನೆಟ್‌ವರ್ಕ್‌ ರಾಯಭಾರಿ ರಿಕಿ ಕೇಜ್‌ ಅವರಿಂದ ಸಂಗೀತ ನೃತ್ಯ ವೈವಿಧ್ಯ ಇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next