Advertisement

ಯುವ ರಾಜಕಾರಣಿಗಳಿಗೆ ಧರ್ಮಸಿಂಗ್‌ ಆದರ್ಶ

04:48 PM Dec 26, 2020 | Adarsha |

ಜೇವರ್ಗಿ: ನಾಡು ಕಂಡ ಅಪರೂಪದ ರಾಜಕಾರಣಿ ಧರ್ಮಸಿಂಗ್‌. ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯುವ ರಾಜಕಾರಣಿಗಳಿಗೆ ಅವರ ಬದುಕು ಆದರ್ಶವಾಗಿದೆ ಎಂದು ನೆಲೋಗಿ ವಿರಕ್ತ ಮಠದ ಪೀಠಾ ಪತಿ ಸಿದ್ಧಲಿಂಗ ಸ್ವಾಮೀಜಿ ನುಡಿದರು.

Advertisement

ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶುಕ್ರವಾರ ದಿ. ಧರ್ಮಸಿಂಗ್‌ ಅವರ 84ನೇ ಜನ್ಮದಿನಾಚರಣೆ ನಿಮಿತ್ಯ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಕಳೆದ 40 ವರ್ಷ ಕಾಲ ರಾಜಕಾರಣ ನಡೆಸಿದ ಧರ್ಮಸಿಂಗ್‌ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ (ಜೆ) ಕಲಂ ಜಾರಿ ಬರಲು ಶ್ರಮಿಸಿದ್ದರು.

ಇದನ್ನೂ ಓದಿ:ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಸಾಗಿಸುವ ವೇಳೆ ಸರಣಿ ಅಪಘಾತ

ನೀರಾವರಿ ಸೌಲಭ್ಯ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು. ಇದಕ್ಕೂ ಮುನ್ನ ಧರ್ಮಸಿಂಗ್‌ ಪುತ್ಥಳಿಗೆ ಅರ್ಚಕ ಉಮೇಶ ಭಟ್‌ ಜೋಶಿ ವಿಶೇಷ ಪೂಜೆ ಸಲ್ಲಿಸಿದರು. ಯಲಗೋಡ ಮಠದ ಗುರುಲಿಂಗ ಸ್ವಾಮೀಜಿ, ಪ್ರಭಾವತಿ ಧರ್ಮಸಿಂಗ್‌, ಶಾಸಕರಾದ ಡಾ| ಅಜಯಸಿಂಗ್‌, ವಿಜಯಸಿಂಗ್‌ ಹಾಗೂ ಅಲ್ಲಮಪ್ರಭು ಪಾಟೀಲ, ಅಮಾತೆಪ್ಪ ಕಂದಕೂರ, ಚಂದ್ರಾಸಿಂಗ್‌, ಶಿವಲಾಲಸಿಂಗ್‌, ಸಂಜಯಸಿಂಗ್‌, ಶರಣು ಮೋದಿ, ಬೈಲಪ್ಪ ನೇದಲಗಿ, ಅಪ್ಪಾಸಾಬ್‌ ಹೊಸಮನಿ, ಮಲ್ಕಣಗೌಡ ಪಾಟೀಲ, ನಾರಾಯಣರಾವ್‌ ಕಾಳೆ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ನೀಲಕಂಠ ಅವಂಟಿ, ಸುನೀಲ ಹಳ್ಳಿ, ರಿಯಾಜ್‌ ಪಟೇಲ್‌, ಗುರುರಾಜ ಹೇರೂರ, ಗುರುಗೌಡ ಮಾಲಿಪಾಟೀಲ, ಶರಭು ಕಲ್ಯಾಣಿ, ಮರೆಪ್ಪ ಸರಡಗಿ ಹಾಗೂ ಅಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next