ಉಡುಪಿ: ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ನಡೆಯುವ ಧರ್ಮ ಸಂಸದ್‌ನ ವೇದಿಕೆ 160 ಅಡಿ ಅಗಲ, 220 ಅಡಿ ಉದ್ದವಿರುತ್ತದೆ. ಸುಮಾರು 150 ಮಂದಿ ವೇದಿಕೆಯಲ್ಲಿ ಆಸೀನರಾಗಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗುತ್ತಿದೆ.
ವೇದಿಕೆಯನ್ನು ಮೂರು ವಿಭಾಗಗಳಂತೆ ವಿನ್ಯಾಸಗೊಳಿಸಲಾಗಿದೆ. ಸಭಾಂಗಣದಲ್ಲಿ ಸುಮಾರು 2,000 ಮಂದಿ ಸಂತರು ಕುಳಿತು ಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪಕ್ಕ ದಲ್ಲಿಯೇ ಸಂತರಿಗೆ ಭೋಜನಾಲಯವಿದೆ.
ಎಂಜಿಎಂ ಮೈದಾನದಲ್ಲಿ ನ. 26ರಂದು ಜರಗಲಿರುವ ಹಿಂದೂ ಸಮಾಜೋತ್ಸವದ ಮುಖ್ಯವೇದಿಕೆ 150 ಅಡಿ ಉದ್ದ, 48 ಅಡಿ ಅಗಲವಿರುತ್ತದೆ. ಮುಖ್ಯ ವೇದಿಕೆಯಲ್ಲಿ 200 ಮಂದಿ ಆಸೀನರಾಗಲು ಅವಕಾಶವಿರುತ್ತದೆ. 5 ಹಂತದ ವೇದಿಕೆ ಇದು. ಎಲ್ಲರೂ ಎದ್ದು ಕಾಣುವ ಹಾಗೆ ವಿನ್ಯಾಸ ಮಾಡಲಾಗುತ್ತದೆ. ಪಕ್ಕದಲ್ಲಿ ಇನ್ನೊಂದು ವೇದಿಕೆ ಇದ್ದು ಅದರಲ್ಲಿ ಸ್ವಾಮೀಜಿಗಳು ಉಪಸ್ಥಿತರಿರುತ್ತಾರೆ. ಇದರಲ್ಲಿ 600 ಮಂದಿಗೆ ಅವಕಾಶವಿರುತ್ತದೆ. ಒಟ್ಟು ವೇದಿಕೆ ಔ ಆಕಾರದಲ್ಲಿರುತ್ತದೆ.
ವೇದಿಕೆಯ ಎಡ ಮತ್ತು ಬಲ ಬದಿಗಳಲ್ಲಿ ಕುರ್ಚಿಗಳನ್ನು ಜೋಡಿಸಿಡಲಾಗುತ್ತದೆ. ಮಧ್ಯದ ಸ್ಥಳ ಖಾಲಿಯಾಗಿರುತ್ತದೆ. ಅದ ರಲ್ಲಿಯೂ ಕುಳಿತುಕೊಳ್ಳಲು ಅವಕಾಶ ಮಾಡಿ ಕೊಡಲಾಗುತ್ತದೆ. ಸರಿಸುಮಾರು 60,000 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಿಕೊಡ ಲಾಗುತ್ತದೆ. 4 ಕಡೆ ಎಲ್‌ಸಿಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತದೆ. ಮೈದಾನದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ, ಪೊಲೀಸ್ ಕೌಂಟರ್, ಮೆಡಿಕಲ್ ಕೌಂಟರ್‌ಗಳಿರುತ್ತವೆ. 1 ಲಕ್ಷ ನೀರಿನ ಬಾಟಲ್, ಮಜ್ಜಿಗೆ ಸಿದ್ಧಪಡಿಸಿಡಲಾಗುತ್ತದೆ ಎಂದು ವೇದಿಕೆ ಉಸ್ತುವಾರಿಗಳಾದ ಭದ್ರಾವತಿ ಉಕ್ಕಿನ ಕಾರ್ಖಾನೆಯ ನಿವೃತ್ತ ಹಿರಿಯ ಎಂಜಿನಿ ಯರ್, ವಿಹಿಂಪ ಕಾರ್ಯಕಾರಿ ಸಮಿತಿ ಸದಸ್ಯ ಮನೋಹರ ತುಳಜಾರಾಂ ಮತ್ತು ನಗರಾಧ್ಯಕ್ಷ ಸಂತೋಷ್ ಸುವರ್ಣ ಬೊಳೆj ತಿಳಿಸಿದ್ದಾರೆ.
ಸಭಾಂಗಣಕ್ಕೆ ಬುಧವಾರ ಡಾ| ಡಿ. ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.