Advertisement
ಡಿಸಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣಗಳ ಬಗ್ಗೆ ತಿಳಿವಳಿಕೆ ನೀಡಲು ಆಯೋಜಿಸಿದ್ದ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುದ್ರಿಸಿದ ಬಗ್ಗೆ ಪ್ರತಿನಿತ್ಯ ತಪ್ಪದೇ ಅನುಬಂಧ “ಎ’ ಮತ್ತು “ಬಿ’ಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನೋಡಲ್ ಅಧಿಕಾರಿಗೆ ಮಾಹಿತಿ ಸಲ್ಲಿಸಬೇಕು. ಮುದ್ರಣಾಲಯದಲ್ಲಿ ಚುನಾವಣೆಗೆ ಸಂಬಂ ಧಿಸಿದಂತೆ ಮುದ್ರಿಸುವ ಪ್ರತಿಯೊಂದು ಪ್ರಚಾರ ಸಾಮಗ್ರಿಯಲ್ಲಿ ಮುದ್ರಕರ ಹಾಗೂ ಪ್ರಕಾಶಕರ ಹೆಸರು, ವಿಳಾಸ ಮತ್ತು ಮುದ್ರಿಸಿದ ಪ್ರತಿಗಳ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು ಎಂದು ಸೂಚಿಸಿದರು.
ಚುನಾವಣೆಗಾಗಿ ನಾಮಪತ್ರದೊಂದಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ವಿವರ ಸಲ್ಲಿಸಿರುತ್ತಾರೆ. ಆ ಖಾತೆ ಮೂಲಕವೇ ಹಣ ಪಡೆಯಬೇಕು. 20 ಸಾವಿರ ರೂ.ಗಿಂತ ಹೆಚ್ಚು ಬಿಲ್‌ಗಳಿದ್ದರೆ ಚೆಕ್ ಅಥವಾ ಡಿಡಿ ಮುಖಾಂತರ ಭರಿಸಿಕೊಳ್ಳಬೇಕು. ಚುನಾವಣೆಗೆ ಸಂಬಂಧಿತ ಖರ್ಚುಗಳೆಲ್ಲ ಅಭ್ಯರ್ಥಿಯು ಇದೇ ಉದ್ದೇಶಕ್ಕಾಗಿ ತೆಗೆದಿರುವ ಖಾತೆಯಿಂದ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
Related Articles
Advertisement
ಪ್ರಚಾರ ಸಾಮಗ್ರಿಯಲ್ಲಿ ಮುದ್ರಿಸುವ ವಿಷಯವು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂಬುದನ್ನು ಸ್ವತಃ ದೃಢೀಕರಿಸಿಕೊಳ್ಳಬೇಕು. ಯಾವುದೇ ಧರ್ಮ, ಜಾತಿ, ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಮತ್ತು ವೈಷಮ್ಯ ಉಂಟು ಮಾಡುವ ವಿಷಯ ಮುದ್ರಿಸಬಾರದು. ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಅಂತಹ ಮುದ್ರಣಾಲಯ ಸೀಜ್ ಮಾಡಲಾಗುವುದು.ದೀಪಾ ಚೋಳನ್, ಜಿಲ್ಲಾಧಿಕಾರಿ ಮುದ್ರಣಾಲಯಗಳ ಮಾಲೀಕರು ಚುನಾವಣಾ ಪ್ರಚಾರ ಸಾಮಗ್ರಿಗಳ ಹೆಚ್ಚು ಪ್ರತಿ ಮುದ್ರಿಸಿ ಕಡಿಮೆ ತೋರಿಸುವ, ಬೇರೆಯವರ ಹೆಸರಿನಿಂದ ಮುದ್ರಿಸುವ ಅಥವಾ ಮರು ಮುದ್ರಿಸುವ ಕಾರ್ಯಕ್ಕೆ ಕೈಹಾಕಬಾರದು. ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಜಾಗೃತದಳ, ಸಮಿತಿ ರಚಿಸಿರುವುದರಿಂದ ಪ್ರತಿದಿನ ಅವಲೋಕನ ನಡೆಯುತ್ತದೆ.
ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ