ಔರಂಗಾಬಾದ್, ಸೆ. 16: ಮಹಾ ರಾಷ್ಟ್ರದ ಪುರಾತತ್ವ ಇಲಾಖೆಯು ಉಸ್ಮಾನಾಬಾದ್ ಜಿಲ್ಲೆಯಲ್ಲಿರುವ ಏಳು ಧಾರಾಶಿವ ಗುಹೆಗಳಲ್ಲಿ ಒಂದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ.
6ನೇ ಶತಮಾನದ ಈ ಪಾರಂಪರಿಕ ತಾಣವು ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಸ್ಮಾನಾಬಾದ್ ನಗರದಿಂದ ಸುಮಾರು 8 ಕಿ.ಮೀ.ದೂರದಲ್ಲಿರುವ ಬಾಲ್ಘಾಟ್ ಪರ್ವತ ಶ್ರೇಣಿಯಲ್ಲಿರುವ ಈ ಗುಹೆಗಳು ಕಲಾತ್ಮಕ ಕೆತ್ತನೆಗಳನ್ನು ಹೊಂದಿದ್ದು, ಅವು ಪ್ರದೇಶಕ್ಕೆ
ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಪ್ರದೇಶದಲ್ಲಿ ಭಾರೀ ಮಳೆಯಾದ ಅನಂತರ ಅವುಗಳಲ್ಲಿ ಒಂದು ಗುಹೆಗೆ ಹಾನಿಯಾಗಿದೆ. ಗುಹೆಯ ಮೇಲ್ಭಾಗದಲ್ಲಿರುವ ಬಂಡೆಯು ಈ ಸ್ತಂಭಗಳೊಂದಿಗೆ ಬೆಂಬಲವನ್ನು ಪಡೆಯಲಿದೆ ಮತ್ತು ಈ ಸ್ಮಾರಕದ ಜೀವನವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.
ಮುಂದಿನ ಎರಡು ತಿಂಗಳುಗಳವರೆಗೆ ಜೀರ್ಣೋದ್ಧಾರ ಕಾರ್ಯ ಮುಂದುವರಿಯಲಿದೆ ಎಂದು ಖಂಡಾರೆ ಹೇಳಿದ್ದಾರೆ. ಈ ಗುಹೆಗಳ ಮಹತ್ವದ ಬಗ್ಗೆ ಕೇಳಿದಾಗ ನಾಂದೇಡ್ ಮೂಲದ ಇತಿಹಾಸಕಾರ ಪ್ರಭಾಕರ್ ದೇವ್ ಅವರು, ಆರನೇ ಶತಮಾನದಲ್ಲಿ ಕೆತ್ತಲಾದ ಈ ಗುಹೆಗಳು ಸಾತವಾಹನರ ಅವಧಿಯಲ್ಲಿ (ಕ್ರಿ.ಪೂ 230 ರಿಂದ ಕ್ರಿ.ಶ 200 ರವರೆಗೆ) ವ್ಯಾಪಾರ ಕೇಂದ್ರವಾಗಿದ್ದ ಟೇರ್ ಬಳಿ ಇವೆ.
ಕ್ರಿ.ಶ 931 ರಲ್ಲಿ ಬರೆದ ಪುಸ್ತಕದಲ್ಲಿ ಈ ಗುಹೆಗಳ ಮೊದಲ ಉಲ್ಲೇಖವು ಕಂಡುಬಂದಿದೆ. ಗುಹೆಗಳು ಬೌದ್ಧ ಧರ್ಮದ್ದೇ ಅಥವಾ ಜೈನ ಧರ್ಮದ್ದೇ ಎಂಬ ಬಗ್ಗೆ ಇತಿಹಾಸಕಾರರಲ್ಲಿ ಇನ್ನೂ ಚರ್ಚೆ ನಡೆಯುತ್ತಿದೆ ಎಂದರು.
ಪುರಾತತ್ವಶಾಸ್ತ್ರಜ್ಞ ಜೇಮ್ಸ್ ಬರ್ಗೆಸ್ ಅವರ ಪುಸ್ತಕದಲ್ಲೂ ಈ ಗುಹೆಗಳನ್ನು ಉಲ್ಲೇಖೀಸಲಾಗಿದೆ ಮತ್ತು ಅನೇಕ ಇತಿಹಾಸಕಾರರು ಈ ಗುಹೆಗಳ ಬಗ್ಗೆ ಬರೆದಿದ್ದಾರೆ ಎಂದು ದೇವ್ ತಿಳಿಸಿದ್ದಾರೆ. ಅವನತಿ ತಪ್ಪಿಸಲು ಪಾರಂಪರಿಕ ತಾಣದ ಮತ್ತಷ್ಟು ಅವನತಿ ತಪ್ಪಿಸಲು, ರಚನೆಯನ್ನು ಬೆಂಬಲಿಸಲು 12 ಸ್ತಂಭಗಳನ್ನು ನಿರ್ಮಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಅಜಿತ್ ಖಂಡಾರೆ ಪಿಟಿಐಗೆ ತಿಳಿಸಿದ್ದಾರೆ.