Advertisement

ಧರ್ಮಸ್ಥಳ ಮೇಳದ ಸೇವೆಯಾಟ ಸಂಪನ್ನ

12:25 AM Jun 01, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಈ ಸಾಲಿನ ಕೊನೆಯ ಸೇವೆಯಾಟಗಳು ಮೇ 26, 27 ಮತ್ತು 28ರಂದು ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 7ರಿಂದ 12ರ ವರೆಗೆ ನಡೆಯಿತು.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಡಾ| ಹೇಮಾವತಿ ವೀ. ಹೆಗ್ಗಡೆಯವರು, ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಕುಮಾರ್‌ ಮತ್ತು ಹೆಗ್ಗಡೆ ಕುಟುಂಬದವರು ಹಾಗೂ ಹರಕೆ ಸೇವೆಯ ಸೇವಾರ್ಥಿಗಳು, ಕ್ಷೇತ್ರದ ಸಿಬಂದಿ ವರ್ಗ ಹಾಗೂ ಭಕ್ತರು ಭಾಗವಹಿಸಿದ್ದರು.

ಮೇ 26ರಂದು ಸಹಸ್ರ ಕವಚ ಮೋಕ್ಷ, ಮೇ 27ರಂದು ಕನಕಾಂಗಿ ಕಲ್ಯಾಣ-ಆಗ್ರ ಪೂಜೆ ಹಾಗೂ ಮೇ 28ರಂದು ವೇದೋದ್ಧರಣ-ರುಕ್ಮಿಣಿ ಕಲ್ಯಾಣ ಪೌರಾಣಿಕ ಪ್ರಸಂಗದ ಯಕ್ಷಗಾನ ಸೇವಾ ಬಯಲಾಟ ಪ್ರದರ್ಶನದೊಂದಿಗೆ ಈ ಸಾಲಿನ ಯಕ್ಷಗಾನ ತಿರುಗಾಟ ಸಮಾಪನಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next