Advertisement

ಸರ್ಕಾರದಿಂದಾಗದ ಕೆಲಸಗಳು ಧರ್ಮಸ್ಥಳ ಸಂಸ್ಥೆ ನೆರವೇರಿಸುತ್ತಿದೆ: ಶಾಸಕ ಮಂಜುನಾಥ್

09:16 PM Nov 06, 2022 | Team Udayavani |

ಹುಣಸೂರು: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಾಗೃತಿ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗದ ಜನರು ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.

Advertisement

ನಗರದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಚೇರಿ-2ವತಿಯಿಂದ ಜನಮಂಗಲ ಕಾರ್ಯಕ್ರಮದಡಿ ತಾಲೂಕಿನ ವಿವಿಧ ಗ್ರಾಮಗಳ ವಿಕಲಾಂಗರಿಗೆ ಕೊಡಮಾಡಿದ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು ಸರಕಾರದಿಂದ ಮಾಡಲಾಗದ ಹಲವಾರು ಕಾರ್ಯಕ್ರಮಗಳನ್ನು ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರು ತಮ್ಮ ಕನಸಿನ ಯೋಜನೆ ಮೂಲಕ ಸಮಾಜದಲ್ಲಿ ನೊಂದವರ ಪಾಲಿಗೆ ಆಶಾಕಿರಣವಾಗಿದ್ದು. ವ್ಯಕ್ತಿಯೊಬ್ಬನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾದ ಯೋಜನೆಗಳನ್ನು ರಾಜ್ಯಾದ್ಯಂತ ಸಾಕಾರಗೊಳಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರು ಸಹ ತಾಯಿ ಹೃದಯದಿಂದ ಎಲ್ಲರಿಗೂ ಸಮನಾಗಿ ಸೌಲಭ್ಯ ಕಲ್ಪಿಸಲು ಕಟಿಬದ್ದವಾಗಿ ಕಾರ್ಯಕ್ರಮ ಆಯೋಜಿಸಿ ಸಫಲತೆ ಕಂಡುಕೊಂಡಿದ್ದಾರೆಂದು ಶ್ಲಾಘಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಹಣ ಕಾಸಿನ ವ್ಯವಹಾರದ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ. ಸೇವಾ ಚಟುವಟಿಕೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನೆ ಮಾತಾಗಿದ್ದು. ವಿಕಲಾಂಗರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿರೆಂದರು.

ಜಿಲ್ಲಾ ಯೋಜನಾ ನಿರ್ಧೆಶಕ ಮುರಳೀಧರ್ ಮಾತನಾಡಿ ಯೋಜನೆವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಕೃಷಿ, ಕೌಶಲ್ಯಾಭಿವೃದ್ದಿ ತರಬೇತಿ, ಮದ್ಯವರ್ಜನ ಶಿಬಿರ, ನಿರ್ಗತಿಕರಿಗೆ ಮಾಶಾಸನ, ಸಂಘಗಳ ಸದಸ್ಯರ ಆರೋಗ್ಯ ವಿಮೆ, ಜನಮಂಗಲ ಕಾರ್ಯಕ್ರಮದಡಿ ವಿಕಲಾಂಗರಿಗೆ ಅಗತ್ಯ ವಿರುವ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದರು.

ತಾಲೂಕು ಯೋಜನಾಧಿಕಾರಿ ಧನಂಜಯ್, ಮೇಲ್ವಿಚಾರಕಿ ರಾಣಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಾಧಿಕಾರಿ ಶೃತಿ, ವ್ಯವಸ್ಥಾಪಕ ಅಶೋಕ್, ಸೇವಾ ಪ್ರತಿನಿಧಿ ಮಾಲ ಸೇರಿದಂತೆ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next