Advertisement

ಯುವ ರಾಜಕಾರಣಿಗಳಿಗೆ ಧರಂ ಆದರ್ಶ

10:06 AM Dec 26, 2021 | Team Udayavani |

ಜೇವರ್ಗಿ: ಈ ನಾಡು ಕಂಡ ಅಪರೂಪದ ರಾಜಕಾರಣಿ ಧರ್ಮಸಿಂಗ್‌ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದು, ಯುವ ರಾಜಕಾರಣಿಗಳಿಗೆ ಅವರ ಬದುಕು ಆದರ್ಶವಾಗಿದೆ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ| ಶಿವಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶನಿ ವಾರ ದಿ. ಧರ್ಮಸಿಂಗ್‌ ಅವರ 85ನೇ ಜನ್ಮ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

Advertisement

ಕಳೆದ 40 ವರ್ಷ ಕಾಲ ರಾಜಕಾರಣ ನಡೆಸಿದ ಧೀಮಂತ ನಾಯಕ ಧರ್ಮಸಿಂಗ್‌ ಅವರು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371ನೇ (ಜೆ) ಕಲಂ ಜಾರಿಗೆ ತಂದು ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟ ನಡೆಸಿದ್ದಾರೆ. ನೀರಾವರಿ ಸೌಲಭ್ಯ, ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತಂದ ಮಹಾನ್‌ ನಾಯಕರು ಅವರಾಗಿದ್ದರು ಎಂದರು.

ನೆಲೋಗಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರುವಾಸಿಯಾದ ಧರ್ಮಸಿಂಗ್‌ ದೀನ, ದಲಿತ, ಹಿಂದುಳಿದವರ ಕಣ್ಮಣಿ. ಹಿರಿಯ ಮುತ್ಸದ್ಧಿ ಮಾರ್ಗದರ್ಶಕರೂ ಆಗಿದ್ದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಧರ್ಮಸಿಂಗ್‌ ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ಎಲ್ಲ ಪಕ್ಷದ ಮುಖಂಡರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು ಎಂದು ಹೇಳಿದರು.

ಧರ್ಮಸಿಂಗ್‌ ಪುತ್ಥಳಿಗೆ ಅರ್ಚಕ ಉಮೇಶ ಭಟ್‌ ಜೋಶಿ ಪೂಜೆ ಸಲ್ಲಿಸಿದರು. ಜೇರಟಗಿಯ ಶ್ರೀ ಮಹಾಂತ ಸಾcಮೀಜಿ, ಕಡಕೋಳದ ಶ್ರೀ ರುದ್ರಮುನಿ ಶಿವಾಚಾರ್ಯರು, ಕುಕನೂರಿನ ಶ್ರೀ ಚನ್ನಮಲ್ಲ ದೇವರು, ಚಿಗರಳ್ಳಿಯ ಶ್ರೀ ಸಿದ್ಧಕಬೀರ ಸ್ವಾಮೀಜಿ, ಕೋಳಕೂರ ಶ್ರೀ, ಕಟ್ಟಿಸಂಗಾವಿ ಶ್ರೀ, ಅಂಕಲಗಾ-ಅತನೂರ ಮಠದ ಗುರುಬಸವ ಸ್ವಾಮೀಜಿ, ಪ್ರಭಾವತಿ ಧರ್ಮಸಿಂಗ್‌, ಶಾಸಕ ಡಾ| ಅಜಯಸಿಂಗ್‌, ವಿಧಾನಪರಿಷತ್‌ ಸದಸ್ಯ ವಿಜಯಸಿಂಗ್‌, ಪ್ರಿಯದರ್ಶಿನಿ, ಚಂದ್ರಾಸಿಂಗ್‌, ಶಿವಲಾಲ್‌ ಸಿಂಗ್‌, ವಿಧಾನಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ್‌ ಮೂಲಗೆ, ಗ್ರಾಪಂ ಅಧ್ಯಕ್ಷ ಬೈಲಪ್ಪ ನೇದಲಗಿ, ಷಣ್ಮುಖಪ್ಪಗೌಡ ಹಿರೇಗೌಡ, ಗೌಡಪ್ಪಗೌಡ ಪಾಟೀಲ ಆಂದೋಲಾ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಸಕ್ರೆಪ್ಪಗೌಡ ಹರನೂರ, ಶಿವಕುಮಾರ ಕಲ್ಲಾ, ನೀಲಕಂಠ ಅವಂಟಿ, ವಸಂತ ನರಿಬೋಳ, ರವಿ ಕೋಳಕೂರ, ಅಜ್ಜು ಲಕ್ಪತಿ, ಭೀಮು ಕಾಚಾಪುರ ಹಾಗೂ ಅಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next