Advertisement

ಎಲ್ಲಾ ನಿನಗಾಗಿ…: ಹೊಸ ಚಿತ್ರಕ್ಕೆ ಧನ್ಯಾ ನಾಯಕಿ

05:00 PM May 04, 2023 | Team Udayavani |

ಡಾ. ರಾಜ್‌ ಕುಟುಂಬದಿಂದ ನಾಯಕಿಯಾಗಿ ಎಂಟ್ರಿಕೊಟ್ಟ ಧನ್ಯಾ ರಾಮ್‌ ಕುಮಾರ್‌ ನಿಧಾನವಾಗಿ ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ “ದಿ ಜಡ್ಜ್ಮೆಂಟ್‌’ ಸಿನಿಮಾ ಒಪ್ಪಿಕೊಂಡಿರುವ ಧನ್ಯಾ ಈಗ ಮತ್ತೂಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದು “ಎಲ್ಲಾ ನಿನಗಾಗಿ’. ಈ ಚಿತ್ರದ ಟೈಟಲ್‌ ಅನ್ನು ನಟ ಶ್ರೀಮುರಳಿ ಅನಾವರಣ ಮಾಡಿದ್ದಾರೆ. ಈ ಚಿತ್ರವನ್ನು ಕಾಶಿ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ರಾಹುಲ್‌ ಈ ಚಿತ್ರದ ನಾಯಕ.

Advertisement

ಇನ್ನು, ನಟಿ ಧನ್ಯಾ ಸಿನಿಕೆರಿಯರ್‌ ಬಗ್ಗೆ ಹೇಳುವುದಾದರೆ ಮನೆಯಲ್ಲಿ ನಟಿಯಾಗುವ ತನ್ನ ಕನಸಿಗೆ ಗ್ರೀನ್‌ ಸಿಗ್ನಲ್‌ ಸಿಗುತ್ತಿದ್ದಂತೆ ಧನ್ಯಾ ಅದಕ್ಕೆ ಬೇಕಾದ ತಯಾರಿಗಳನ್ನು ಆರಂಭಿಸಿದ್ದರು. ಮೊದಲು ರಂಗಭೂಮಿ ಮತ್ತು ಸಿನಿಮಾಕ್ಕೆ ಸಂಬಂಧಿಸಿದ ಪರಿಣಿತರಿಂದ ಒಂದಷ್ಟು ವರ್ಕ್‌ಶಾಪ್‌, ತರಬೇತಿ ಪಡೆದುಕೊಂಡ ಧನ್ಯಾ ಅಭಿನಯದ ವಿವಿಧ ಪ್ರಾಕಾರಗಳನ್ನು ಕರಗತ ಮಾಡಿಕೊಂಡರು. ಆದರೆ ಇನ್ನೂ ಕಲಿಯಬೇಕೆಂಬ ತುಡಿತವಿದ್ದ ಕಾರಣ, ರಂಗಕರ್ಮಿ ಪಿ.ಆರ್‌ ಪಂಡಿತ್‌ ಮತ್ತು “ಅಭಿನಯ ತರಂಗ’ ರಂಗತಂಡದಲ್ಲಿ ಗೌರಿದತ್ತು ಅವರೊಂದಿಗೂ ಕೆಲಕಾಲ ತರಬೇತಿ ಪಡೆದುಕೊಂಡರು.

ಇದು ಧನ್ಯಾಗೆ ಪಾತ್ರ ಪೋಷಣೆ, ಭಾಷೆ ಮೇಲಿನ ಹಿಡಿತ, ಹಾವ-ಭಾವ-ಭಂಗಿ ಮೊದಲಾದ ಅಭಿನಯ ಸೂಕ್ಷ್ಮತೆಗಳನ್ನು ಕಲಿಸಲು ಸಹಾಯ ಮಾಡಿತು. ಇದರೊಂದಿಗೆ ಸಿನಿಮಾಕ್ಕೆ ಬೇಕಾದ ಡ್ಯಾನ್ಸ್‌ ತರಬೇತಿ, ಫಿಟ್‌ನೆಸ್‌ಗಾಗಿ ಜಿಮ್‌, ಏರೋಬಿಕ್ಸ್‌ ಹೀಗೆ ಒಂದಷ್ಟು ವರ್ಕೌಟ್‌ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next