Advertisement

ಮನೆ ಮಗಳ ಮೊದಲ ಚಿತ್ರಕ್ಕೆ ಫ್ಯಾಮಿಲಿ ಸಾಥ್‌

09:08 AM Oct 05, 2021 | Team Udayavani |

ಡಾ.ರಾಜ್‌ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿ ನಟಿಸಿರುವ “ನಿನ್ನ ಸನಿಹಕೆ’ ಚಿತ್ರ ಇದೇ ಅ.08ರಂದು ತೆರೆಕಾಣುತ್ತಿದೆ. ಮೊದಲ ಚಿತ್ರದ ಬಗ್ಗೆ ಧನ್ಯಾ ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ಜೊತೆಗೆ ಇಡೀ ರಾಜ್‌ ಕುಟುಂಬ ಕೂಡಾ ಈ ಸಿನಿಮಾಕ್ಕೆ ಸಾಥ್‌ ನೀಡಲಿದೆ. ಅದು ಪ್ರೀಮಿಯರ್‌ ಶೋನಲ್ಲಿ ಭಾಗವಹಿಸುವ ಮೂಲಕ.

Advertisement

ಚಿತ್ರದ ಪ್ರೀಮಿಯರ್‌ ಶೋ ಅ.07ರಂದು ನಡೆಯಲಿದ್ದು, ಶಿವಣ್ಣ, ಪುನೀತ್‌ ರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ವಿನಯ್, ಯುವ ರಾಜ್‌ ಕುಮಾರ್‌, ಶ್ರೀಮುರಳಿ, ವಿಜಯ್‌ ರಾಘವೇಂದ್ರ, ಧಿರೇನ್‌ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಈ ಪ್ರೀಮಿಯರ್‌ ಶೋನಲ್ಲಿ ಭಾಗವಹಿಸಿ, ಧನ್ಯಾ ರಾಮ್‌ಕುಮಾರ್‌ಗೆ ಪ್ರೋತ್ಸಾಹ ನೀಡಲಿದ್ದಾರೆ.

ಇದನ್ನೂ ಓದಿ:ನವೋಮಿ ಒಸಾಕಗೆ ಮತ್ತೂಂದು ಬೇಸರ: ಅಗ್ರ 10ರ ಶ್ರೇಯಾಂಕದಿಂದ ಹೊರಕ್ಕೆ

ಸೂರಜ್‌ ಗೌಡ ನಾಯಕರಾಗಿರುವ ಈ ಚಿತ್ರವನ್ನು ಸ್ವತಃ ಅವರೇ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಇದೊಂದು ಬ್ಯೂಟಿಫ‌ುಲ್‌ ಲವ್‌ಸ್ಟೋರಿ ಹೊಂದಿರುವ ಚಿತ್ರ. ಮನರಂಜನಾತ್ಮಕ ಅಂಶಗಳಿರುವ ಚಿತ್ರ ಇದಾಗಲಿದೆ. ವಿನಾಕಾರಣ ಇಲ್ಲಿ ಬಿಲ್ಡಪ್ಸ್‌ಗಳಿಲ್ಲ. ಸಿನಿಮಾ ನೋಡಿದವರಿಗೆ ಇದು ಎಲ್ಲೋ ನೋಡಿದ, ಕೇಳಿದ ಲವ್‌ಸ್ಟೋರಿ ಎನಿಸುವಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಲಿವಿಂಗ್‌ ರಿಲೇಶನ್‌ ಶಿಪ್‌ ಬಗ್ಗೆಯೂ ಹೇಳಿದ್ದೇವೆ. ಇವತ್ತಿಗೆ ಸಮಾಜ ಆ ಸಂಬಂಧವನ್ನು ಹೇಗೆ ನೋಡುತ್ತಾರೆ ಎಂಬ ಅಂಶದ ಜೊತೆಗೆ ಅದಕ್ಕೆ ನಮ್ಮ ಸಿನಿಮೇಟಿಕ್‌ ಆ್ಯಂಗಲ್‌ ಕೂಡಾ ನೀಡಲಾಗಿದೆ. ಈ ಚಿತ್ರದ ಹೈಲೈಟ್‌ಗಳಲ್ಲಿ ಕಥೆ ಹಾಗೂ ಚಿತ್ರಕಥೆ ಕೂಡಾ ಒಂದು’ ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next