Advertisement

ಧನ್ವೀರ್‌ ನಟನೆಯ ‘ವಾಮನ’ ಟೀಸರ್‌ ರಿಲೀಸ್‌

11:39 AM Aug 16, 2022 | Team Udayavani |

ಲವ್‌ ಸ್ಟೋರಿ ಜೊತೆಗೆ ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಕಮರ್ಷಿಯಲ್‌ ಸಿನಿಮಾವಾಗಿರುವ “ವಾಮನ’ ಟೀಸರ್‌ ಆ.15ರಂದು ರಿಲೀಸ್‌ ಆಗಿದೆ. ನಿರ್ಮಾಪಕ ಚೇತನ್‌ ಕುಮಾರ್‌ ಹುಟ್ಟುಹಬ್ಬ ಹಾಗೂ ಸ್ವಾತಂತ್ರ್ಯದ ವಿಶೇಷ ಉಡುಗೊರೆಯಾಗಿ “ವಾಮನ’ ಟೀಸರ್‌ ಬಿಡುಗಡೆಯಾಗಿದೆ.

Advertisement

ಕನ್ನಡ, ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್‌ ಆಗಿರುವ ಶಂಕರ್‌ ರಾಮನ್‌ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಧ್ವನೀರ್‌ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಈಗಾಗಲೇ 70 ದಿನದ ಶೂಟಿಂಗ್‌ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲಿಯೇ ಬಾಕಿ ಉಳಿದ ಚಿತ್ರೀಕರಣ ಮುಗಿಸಲಿದೆ.

ಇದನ್ನೂ ಓದಿ:ಅಟಲ್‌ ನೆನಪು; ಲತಾ “ಮೇರೆ ವತನ್‌…’ ಅಟಲ್‌ ಕಣ್ಣಂಚು ತೇವಗೊಳಿಸಿತ್ತು…

ಹತ್ತಾರು ವರ್ಷಗಳಿಂದ ಸಿನಿಮಾ ಕನಸು ಕಂಡಿದ್ದ ನಿರ್ಮಾಪಕ ಚೇತನ್‌ ಈಗ “ವಾಮನ’ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಚೇತನ್‌ ಕುಮಾರ್‌ ಸಿನಿಮಾ ಮೇಲಿನ ಪ್ರೀತಿಯಿಂದ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದ ನಾಯಕ ಧನ್ವೀರ್‌ ಆತ್ಮೀಯ ಗೆಳೆಯ. ಈ ನಂಟು ಇವರನ್ನು ಸಿನಿಮಾ ಮಾಡುವ ಉತ್ಸುಕತೆ ಹೆಚ್ಚಿಸಿದೆ. ಹೀಗಾಗಿ ನಿರ್ದೇಶಕರು ಹೇಳಿದ ಕಥೆಗೆ ಫಿದಾ ಆಗಿ ಅದ್ಧೂರಿಯಾಗಿ “ವಾಮನ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತಮ್ಮದೇ “ಈಕ್ವಿನಾಕ್ಸ್‌ ಗ್ಲೋಬಲ್‌ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next