Advertisement
ಆದ್ದರಿಂದಲೇ ಪ್ರತೀ ವರ್ಷ ಅಶ್ವಯುಜ ಬಹುಳ ತ್ರಯೋದಶಿಯಂದು ಹಿಂದೂ ಸಮಾಜವು, ಆಯುರ್ವೇದ ಶಿಕ್ಷಣ ಸಂಸ್ಥೆಗಳು ಮತ್ತು ಇತರ ಆರೋಗ್ಯ ಸಂಬಂಧೀ ಕೇಂದ್ರಗಳಲ್ಲಿ ಧನ್ವಂತರಿ ಜಯಂತಿಯ ಆಚರಣೆ, ಧನ್ವಂತರೀ ಪೂಜಾ ಮಹೋತ್ಸವ ಸಹಿತವಾಗಿ ಪ್ರಾಮುಖ್ಯವನ್ನು ಪಡೆದಿದೆ. ಈ ವರ್ಷ ನವೆಂಬರ್ 2 ರಂದು ಧನ್ವಂತರೀ ಜಯಂತಿ ಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ.”
Related Articles
Advertisement
ಇದನ್ನೂ ಓದಿ:ರಾಜ್ಯದಲ್ಲಿ ಮುಂದಿನ ಐದು ದಿನಗಳವರೆಗೆ ಅಕಾಲಿಕ ಮಳೆ ಸಾಧ್ಯತೆ
ದೇವತೆಗಳು ರಾಕ್ಷಸರೊಂದಿಗೆ ಹೋರಾಡುವ ಸಂದರ್ಭಗಳಲ್ಲಿ ಗುಣಪಡಿಸಲಾರದ ನೋವು, ವ್ಯಾಧಿಗಳಿಗೆ ತುತ್ತಾಗುವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿಯಾಗಿ ವಿಷ್ಣು ಅವತರಿಸಿದನೆಂದು ನಂಬಲಾಗಿದೆ.
ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲಿ 1) ಧನು +ಏವ+ಅಂತಃ+ಅರಿ=ಧನ್ವಂತರಿ (ಸರ್ಜನ್), ಧನ್ವಂ ಈಯರ್ತಿ ಗತ್ಛತೀತಿ ಧನ್ವಂತರೀ ಎಂದೂ ಹೇಳಲಾಗಿದೆ. ಭಾರತೀಯ ವೈದ್ಯ ಪದ್ಧತಿಯ ಲ್ಲಿಯೂ ನಿಖರವಾಗಿ ಔಷಧ ಸಾಧ್ಯ ಹಾಗೂ ಶಸ್ತ್ರ ಸಾಧ್ಯ ರೋಗಗಳ ವಿವರಣೆ ಇದೆ. ಅವುಗಳಲ್ಲಿ ಶಸ್ತ್ರ ಚಿಕಿತ್ಸಾ ಪಿತಾಮಹನಾಗಿ ಧನ್ವಂತರಿಯನ್ನು ಉಲ್ಲೇಖಿಸಲಾಗಿದೆ. ಧನ್ವಂತರಿಯು ತನ್ನ ಶಿಷ್ಯ ವರ್ಗಗಳಿಗೆ ಶಸ್ತ್ರ ಚಿಕಿತ್ಸಾ ಸಹಿತ ಆಯುರ್ವೇದದ ಉಪದೇಶವನ್ನು ಮಾಡಿದ್ದನೆಂದೂ ಅವುಗಳಲ್ಲಿ ಸುಶ್ರುತಾಚಾರ್ಯರು ಶಸ್ತ್ರ ಚಿಕಿತ್ಸಾ ಪಾರಂಗತರಾ ದರೆಂದೂ ಹೇಳಲಾಗಿದೆ. ಅವರನ್ನು ಕಸಿ ಅಥವಾ ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ಎಂದೂ ಹೇಳ ಲಾಗಿದೆ. 2) ಧನುಷಾ+ತರತೇ+ತಾರಯತೇ +ಪಾಪಾತ್=ಧನ್ವಂತರಿ (ಪಾಪ ವಿಮುಕ್ತಿ) ಎಂಬುದು ಧನ್ವಂತರಿ ಪದದ ನಿಷ್ಪತ್ತಿಯಾಗಿದೆ.
ನಮಾಮಿ ಧನ್ವಂತರಿಮ್ ಆದಿದೇವಂ ಸುರಾ ಸುರೈರ್ವಂದಿತ ಪಾದಪದ್ಮಂ ಲೋಕೇಜರಾಋಗ್ ಭಯ ಮೃತ್ಯುನಾಶಂ ದಾತಾರಮೀಶಂ ವಿವಿಧೌಷಧೀನಾಂ ಧನ್ವಂತರೀ ರಮಾನಾಥಮ್ ಸರ್ವ ರೋಗ ವಿನಾಶಕಮ್. ಆಯುರ್ವೇದ ಪ್ರವಕ್ತಾರಮ್ ವಂದೇ ಪೀಯೂಷ ದಾಯಕಮ್.ಎಂಬ ಶ್ಲೋಕದೊಂದಿಗೆ ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿ ಕಾರ್ಯ ಆರಂಭಿಸಿದರೆ ದಿನವಿಡೀ ಚೈತನ್ಯಪೂರ್ಣತೆ ಉಳಿಯು ತ್ತದೆ ಎನ್ನಲಾಗಿದೆ. ಧನ್ವಂತರಿ ಸುಪ್ರಭಾತ, ಧನ್ವಂತರಿ ಪ್ರಪತ್ತಿ, ಧನ್ವಂತರಿ ಸ್ಮತಿಗಳಲ್ಲಿ ಧನ್ವಂತರಿ ದೇವರ ವಿಶೇಷತೆಯನ್ನು ಬಣ್ಣಿಸಲಾಗಿದೆ. ವಿಷ್ಣುವಿನ ಅವತಾರವೆಂದೇ ಕರೆಯ ಲ್ಪಡುವ ಧನ್ವಂತರಿಯನ್ನು ಸದಾ ಭಜಿಸಿದರೆ ಯಾವುದೇ ರೋಗ ರುಜಿನಗಳೂ ಕಾಡುವುದಿಲ್ಲ. ಹಾಗೆಯೇ ಇನ್ನೊಂದೆಡೆ ಧನ್ವಂತರೀ ದಿವೋ ದಾಸನೆಂಬ ಕಾಶೀರಾಜನು ಸಹ ಧನ್ವಂತರಿ ಯಾಗಿದ್ದು ಮಹರ್ಷಿ ಭಾರಧ್ವಾಜರ ಶಿಷ್ಯನೆಂದೂ ಹೇಳಲಾಗಿದೆ. ಒಟ್ಟಿನಲ್ಲಿ ಆರೋಗ್ಯ ಪರಿಪಾಲಕನಾಗಿ ಸಕಲ ಚಿಕಿತ್ಸಾ ಸೂತ್ರ ನೀಡಿದ ದೇವ ಧನ್ವಂತರಿಯ ಪೂಜಾ ಮಹೋತ್ಸವವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಧನ್ವಂತರಿ ಮಹೋತ್ಸವದ ದಿನ ಧನ್ವಂತರಿ ಹೋಮಹವನ ಹಾಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರಸಾದ ರೂಪವಾಗಿ ಸುಮಧುರ ಗಂಧದ ಸಪಾದ ಭಕ್ಷ್ಯವನ್ನು ಹೋಲುವ ತಿನಿಸನ್ನು ಸಹ ಅರ್ಚಿಸಿ ಭಕ್ಷಿಸಲಾಗುತ್ತದೆ. – ಡಾ| ಸುರೇಶ ನೆಗಳಗುಳಿ, ಮಂಗಳೂರು