Advertisement

Dhanush: ಸಂಗೀತ ದಿಗ್ಗಜ ಇಳಯರಾಜ ಬಯೋಪಿಕ್‌ ಸಿನಿಮಾಕ್ಕೆ ಬಣ್ಣ ಹಚ್ಚಲಿದ್ದಾರ ಧನುಷ್?

06:36 PM Oct 31, 2023 | Team Udayavani |

ಚೆನ್ನೈ: ಕಾಲಿವುಡ್‌ ಸಿನಿರಂಗದಲ್ಲಿ ಭಿನ್ನ – ವಿಭಿನ್ನ ಪಾತ್ರಗಳನ್ನು ಮಾಡಿರುವ ನಟ ಧನುಷ್‌ ಸದ್ಯ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಮತ್ತೊಂದು ದೊಡ್ಡ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Advertisement

ʼಕ್ಯಾಪ್ಟನ್‌ ಮಿಲ್ಲರ್‌ʼ ಬಿಟ್ಟರೆ ಧನುಷ್‌ ಅವರು ತನ್ನದೇ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ “D50” ಎಂದು ಟೈಟಲ್‌ ಇಡಲಾಗಿದೆ. ಈ ನಡುವೆ ಧನುಷ್‌ ಅವರು ಸಂಗೀತ ದಿಗ್ಗಜ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಸಿನಿಕೆರಿಯರ್‌ ನಲ್ಲಿ ಅನೇಕ ಭಿನ್ನ ಪಾತ್ರಗಳನ್ನು ಮಾಡಿರುವ ಧನುಷ್‌ ಅವರು, ಇಳಯರಾಜ ಅವರ ಬಯೋಪಿಕ್‌ ನಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್‌ ವಲಯದಲ್ಲಿ ವೈರಲ್‌ ಆಗಿದೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ಇನ್ನಷ್ಟೇ ವಿವರಗಳು ಹೊರಬೀಳಬೇಕಿದೆ.

ಗಾಯಕನಾಗಿಯೂ ಗುರುತಿಸಿಕೊಂಡಿರುವ ಧನುಷ್‌ ಅವರು ʼಇಳಯರಾಜʼನಾಗಿ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ. 2018 ರಲ್ಲಿ ಬಂದ ಧನುಷ್‌ ಅವರ ʼಮಾರಿ -2ʼ ಸಿನಿಮಾದಲ್ಲಿ ಇಳಯರಾಜ ಅವರು ಹಾಡೊಂದು ಹಾಡಿದ್ದರು. ಈ ಹಾಡನ್ನು ಇಳಯರಾಜ ಅವರ ಮಗ ಯುವನ್ ಶಂಕರ್ ರಾಜ ಅವರು ಸಂಯೋಜಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next