Advertisement

1,750 ಕಿ. ಮೀ. ಅಲ್ಟ್ರಾ ಸ್ಪೈಸ್‌ ಸೈಕಲ್‌ ರೇಸ್‌ನಲ್ಲಿ ಧನರಾಜ್‌ ಅಮೋಘ

06:22 AM Feb 04, 2019 | Team Udayavani |

ಮಹಾನಗರ : ವಿಆರ್‌ ಸೈಕ್ಲಿಂಗ್‌ ಮಂಗಳೂರು ತಂಡದ ಧನರಾಜ್‌ ಕರ್ಕೇರ ಅವರು 1750 ಕಿ.ಮೀ. ಅಲ್ಟ್ರಾ ಸ್ಪೈಸ್‌ ಸೈಕಲ್‌ ರೇಸ್‌ನಲ್ಲಿ ಭಾಗವಹಿಸಿ ಅದನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕನ್ನಡಿಗ ಹಾಗೂ ಮಂಗಳೂರಿನ ಮೊದಲ ಸೈಕ್ಲಿಸ್ಟ್‌ಅನ್ನಿಸಿಕೊಂಡರು.

Advertisement

ಅಲ್ಟ್ರಾ ಸ್ಪೈಸ್‌ ಎನ್ನುವುದು ಇನ್ಸ್ಪಿಯರ್‌ ಇಂಡಿಯಾ ನಡೆಸುವ ಭಾರತದ ಅತ್ಯಂತ ಕಠಿಣ ಮತ್ತು ಬಹು ದೂರದ, ಸಹಿಷ್ಣುತೆಯ ಸೆ„ಕಲ್‌ ರೇಸ್‌. ಇದರ 3ನೇ ಆವೃತ್ತಿಯಲ್ಲಿ, ದೇಶದ ವಿವಿಧ ಭಾಗಗಳಿಂದ ಬಂದ 11 ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು.

ಗೋವಾದ ಕಡಲತೀರದಿಂದ ಪ್ರಾರಂಭವಾಗುವ ಈ ಸೈಕ್ಲಿಂಗ್‌ ಸ್ಪರ್ಧೆ, ಕರಾವಳಿಯ ರಸ್ತೆಗಳಲ್ಲಿ ಹಾದುಹೋಗಿ ಹೊನ್ನಾವರದಲ್ಲಿ ಒಳನಾಡಿಗೆ ತಿರುಗುತ್ತದೆ. ಪಶ್ಚಿಮ ಘಟ್ಟದ ಸಿರಿಮೆ, ಜೋಗದ ಜಲಪಾತದ ಮೂಲಕ ಹಾದುಹೋಗಿ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ವಿರಾಜಪೇಟೆ, ವಾಯ್ನಾಡ್‌, ಗುಡಲೂರು ಮೂಲಕ ಊಟಿ ತಲುಪುತ್ತದೆ. ಅದೇ ಮಾರ್ಗದಲ್ಲಿ ಹಿಂದಿರುಗಿ, ಗೋವಾದಲ್ಲಿ ಪೂರ್ಣಗೊಳ್ಳುತ್ತದೆ.4 ರಾಜ್ಯಗಳ ಮೂಲಕ ಹಾದುಹೋಗುವ ಈ ಮಾರ್ಗದಲ್ಲಿ, ಹಲವಾರು ಏರು ಇಳಿಕೆಯ ಪ್ರದೇಶಗಳನ್ನು ಕ್ರಮಿಸುತ್ತ ಸವಾರರು, ಸುಮಾರು 22,500 ಮೀಟರುಗಳಷ್ಟು ಎತ್ತರ ಹಲವಾರು ಕೊರತೆಗಳನ್ನು ನಿಭಾಯಿಸಿ ಮುಂದುವರಿಯಬೇಕಾಗುತ್ತದೆ. ಇಂತಹ ಕಠಿಣಸ್ಪರ್ಧೆಯಲ್ಲಿ ಧನರಾಜ್‌ ಭಾಗವಹಿಸಿ ಎಲ್ಲರ ಮೆಚ್ಚಗೆಗೆ ಪಾತ್ರರಾಗಿದ್ದಾರೆ. ಆರೋಗ್ಯದಲ್ಲಿ ಉಂಟಾದ ಏರುಪೇರುಗಳನ್ನು ಲೆಕ್ಕಿಸದೆ ಧನರಾಜ್‌ ಅವರು ಗುರಿಮಟ್ಟಿದ ಕಾರಣಕ್ಕೆ ಅವರಿಗೆ ಶ್ಲಾಘನೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next