Advertisement

ರಾಮನವಮಿಗೆ ಬರಲಿದೆ ಡಾಲಿ ಧನಂಜಯರ ‘ಹೊಯ್ಸಳ’

04:04 PM Sep 08, 2022 | Team Udayavani |

ನಟ ಡಾಲಿ ಧನಂಜಯ ನಾಯಕರಾಗಿ ಅಭಿನಯಿಸು ತ್ತಿರುವ “ಹೊಯ್ಸಳ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 30.3.2023 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

Advertisement

ಅಂದು ಶ್ರೀರಾಮನವಮಿ ಎಂಬುದು ಮತ್ತೂಂದು ವಿಶೇಷ.ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಈಗ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಡಾಲಿ ಧನಂಜಯ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಅವರು ನಟಿಸುತ್ತಿದ್ದು, ಚಿತ್ರವನ್ನು ವಿಜಯ್ ಎನ್ ನಿರ್ದೇಶನ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next