Advertisement

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

11:10 PM Dec 02, 2021 | Team Udayavani |

ಗಾಲೆ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಧನಂಜಯ ಡಿ ಸಿಲ್ವ ಬಾರಿಸಿದ ಅಜೇಯ 153 ರನ್‌ ಪರಾಕ್ರಮದಿಂದ ಪ್ರವಾಸಿ ವಿಂಡೀಸ್‌ ಎದುರಿನ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

Advertisement

4ನೇ ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 328 ರನ್‌ ಗಳಿಸಿದ್ದು, 279 ರನ್ನುಗಳ ಮುನ್ನಡೆಯಲ್ಲಿದೆ. 259 ಎಸೆತ ನಿಭಾಯಿಸಿರುವ ಧನಂಜಯ ಡಿ ಸಿಲ್ವ 11 ಬೌಂಡರಿ, 2 ಸಿಕ್ಸರ್‌ ಬಾರಿಸಿದ್ದಾರೆ.

ಇದು ಅವರ 9ನೇ ಟೆಸ್ಟ್‌ ಶತಕ. ಡಿ ಸಿಲ್ವ ಅವರೊಂದಿಗೆ 25 ರನ್‌ ಮಾಡಿರುವ ಲಸಿತ್‌ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-204 ಮತ್ತು 8 ವಿಕೆಟಿಗೆ 328. ವೆಸ್ಟ್‌ ಇಂಡೀಸ್‌: 253.

ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

Advertisement
Advertisement

Udayavani is now on Telegram. Click here to join our channel and stay updated with the latest news.

Next