Advertisement

ಡಾಲಿ-ರಚಿತಾ ನಟನೆಯ ‘ಮಾನ್ಸೂನ್ ರಾಗ’ ಬಿಡುಗಡೆ ದಿನಾಂಕ ಫಿಕ್ಸ್

01:20 PM Sep 03, 2022 | Team Udayavani |

ಡಾಲಿ ಧನಂಜಯ್‌ ನಟನೆಯ “ಮಾನ್ಸೂನ್‌ ರಾಗ’ ಚಿತ್ರ ಆ.19ರಂದು ತೆರೆಕಾಣಬೇಕಿತ್ತು. ಆದರೆ, ಚಿತ್ರದ ತಾಂತ್ರಿಕ ಕೆಲಸಗಳು ಬಾಕಿ ಉಳಿದಿದ್ದರಿಂದ ಚಿತ್ರದ ಬಿಡುಗಡೆ ಕೂಡಾ ಮುಂದೆ ಹೋಗಿತ್ತು. ಈಗ ಚಿತ್ರದ ಬಿಡುಗಡೆ ಅಂತಿಮವಾಗಿದೆ. ಸೆ.16ರಂದು ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡ ಅಧಿಕೃತವಾಗಿ ಇದನ್ನು ಘೋಷಿಸಿದೆ.

Advertisement

ಇನ್ನು, ಮೊದಲ ಹಂತವಾಗಿ ಚಿತ್ರ ಸೆನ್ಸಾರ್‌ ಪಾಸಾಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಹಿಟ್‌ ಆಗಿದೆ. “ರಾಗ ಸುಧಾ’ ಹಾಗೂ “ಮುದ್ದಾದ ಮೂತಿ’ ಎಂಬ ಹಾಡುಗಳನ್ನು ಬಿಡುಗಡೆ ಮಾಡಿದ್ದು, ಅದು ಹಿಟ್‌ಲಿಸ್ಟ್‌ ಸೇರಿದೆ.

ಇತ್ತೀಚೆಗೆ “ಮುದ್ದಾದ ಮೂತಿ’ ಎಂಬ ವಿಡಿಯೋ ಸಾಂಗ್‌ ರಿಲೀಸ್‌ ಆಗಿದ್ದು, ಈ ಹಾಡನ್ನು ಅಚ್ಯುತ್‌ ಕುಮಾರ್‌ ಮೇಲೆ ಮಾಡಲಾಗಿದ್ದು, ಸಖತ್‌ ಕಲರ್‌ಫ‌ುಲ್‌ ಆಗಿ ಚಿತ್ರೀಕರಿಸಲಾಗಿದೆ. ಪ್ರಮೋದ್‌ ಮರವಂತೆ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್‌ ಅವರ ಧ್ವನಿ ಇದೆ.

ಇದನ್ನೂ ಓದಿ:ಸೋಲಿನೊಂದಿಗೆ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಸೆರೆನಾ ವಿಲಿಯಮ್ಸ್‌

ಈಗಾಗಲೇ ಬಿಡುಗಡೆಯಾಗಿರುವ “ರಾಗ ಸುಧಾ’ ಹಾಡಿನಲ್ಲಿ ಯಶಾ ಶಿವಕುಮಾರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದು, ದಕ್ಷಿಣ್‌ ಕುಮಾರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಯಶಾ ಇಂಟ್ರೊಡಕ್ಷನ್‌ಗಾಗಿಯೇ ಮಾಡಿದ ಹಾಡು ಎಂಬುದು ವಿಶೇಷವಾದರೆ, ಇದನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಓದಿದ ಕುಮಟಾ ಬಳಿಯ ಶಾಲೆಯೊಂದರಲ್ಲಿ ಚಿತ್ರೀಕರಣ ನಡೆಸಿರುವುದು ಮತ್ತೂಂದು ವಿಶೇಷ. ಮಳೆಯ ಭೋರ್ಗರೆತದ ನಡುವೆ ಕುಣಿವ ಯಶಾ, ರೆಟ್ರೋ ಸ್ಟೆçಲ್‌ನಲ್ಲಿ ಕಂಗೊಳಿಸಿದ್ದಾರೆ.

Advertisement

“ಪುಷ್ಪಕ ವಿಮಾನ’, “ಇನ್ಸ್‌ಪೆಕ್ಟರ್‌ ವಿಕ್ರಂ’, “ರಂಗನಾಯಕ’ ಸಿನಿಮಾಗಳನ್ನು ನಿರ್ಮಿಸಿರುವ ಎ.ಆರ್‌. ವಿಖ್ಯಾತ್‌ “ಮಾನ್ಸೂನ್‌ ರಾಗ’ಕ್ಕೆ “ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ ‘ ಬ್ಯಾನರ್‌ ಅಡಿ ಬಂಡವಾಳ ಹೂಡಿದ್ದಾರೆ.

“ವಿಖ್ಯಾತ್‌ ಸ್ಟುಡಿಯೋಸ್‌’ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿ ಲಕ್ಷಾಂತರ ಹಿಟ್ಸ್‌ ದಾಖಲಾಗಿದೆ. ಚಿತ್ರಕ್ಕೆ ಎಸ್‌. ರವೀಂದ್ರನಾಥ್‌ ನಿರ್ದೇಶನವಿದೆ. ಚಿತ್ರಕ್ಕೆ ಎಸ್‌. ಕೆ ರಾವ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ. ಗುರು ಕಶ್ಯಪ್‌ ಸಿನಿಮಾದ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next