Advertisement

‘ಮಾನ್ಸೂನ್‌ ರಾಗ’ ಪ್ರಮೋಶನ್‌ ನಲ್ಲಿ ಡಾಲಿ-ರಚ್ಚು ಸ್ಟೆಪ್‌!

10:17 AM Sep 11, 2022 | Team Udayavani |

ಡಾಲಿ ಧನಂಜಯ್‌ ನಟನೆಯ “ಮಾನ್ಸೂನ್‌ ರಾಗ’ ಚಿತ್ರ ಸೆ.16ರಂದು ತೆರೆಕಾಣುತ್ತಿದೆ. ಈಗಾಗಲೇ ಟೀಸರ್‌, ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಪ್ರಮೋಶನಲ್‌ ವಿಡಿಯೋ ಶುಕ್ರವಾರ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಧನಂಜಯ್‌ ಹಾಗೂ ರಚಿತಾ ಕಾಣಿಸಿಕೊಂಡಿದ್ದಾರೆ.

Advertisement

ಚಿತ್ರದ ಪ್ರಚಾರಕ್ಕಾಗಿಯೇ ಇತ್ತೀಚೆಗೆ ಈ ಹಾಡನ್ನು ವಿಶೇಷವಾಗಿ ಚಿತ್ರೀಕರಿಸಲಾಗಿತ್ತು. ಮ್ಯೂಸಿಕ್‌ ಬಿಟ್ಸ್‌ಗೆ ರಚಿತಾ ಹಾಗೂ ಧನಂಜಯ್‌ ಮಸ್ತ್ ಸ್ಟೆಪ್‌ ಹಾಕುವ ಮೂಲಕ ಸಿನಿಮಾದ ಮೇಲಿನ ಕ್ರೇಜ್‌ ಹೆಚ್ಚಿಸಿದ್ದಾರೆ.

ಇನ್ನು, ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಹಿಟ್‌ ಆಗಿದೆ. “ರಾಗ ಸುಧಾ’ ಹಾಗೂ “ಮುದ್ದಾದ ಮೂತಿ’ ಎಂಬ ಹಾಡುಗಳನ್ನು ಬಿಡುಗಡೆ ಮಾಡಿದ್ದು, ಅದು ಹಿಟ್‌ಲಿಸ್ಟ್‌ ಸೇರಿದೆ. ಇತ್ತೀಚೆಗೆ “ಮುದ್ದಾದ ಮೂತಿ’ ಎಂಬ ವಿಡಿಯೋ ಸಾಂಗ್‌ ರಿಲೀಸ್‌ ಆಗಿದ್ದು, ಈ ಹಾಡನ್ನು ಅಚ್ಯುತ್‌ ಕುಮಾರ್‌ ಮೇಲೆ ಮಾಡಲಾಗಿದ್ದು, ಸಖತ್‌ ಕಲರ್‌ಫ‌ುಲ್‌ ಆಗಿ ಚಿತ್ರೀಕರಿಸಲಾಗಿದೆ. ಪ್ರಮೋದ್‌ ಮರವಂತೆ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್‌ ಅವರ ಧ್ವನಿ ಇದೆ.

ಈಗಾಗಲೇ ಬಿಡುಗಡೆಯಾಗಿರುವ “ರಾಗ ಸುಧಾ’ ಹಾಡಿನಲ್ಲಿ ಯಶಾ ಶಿವಕುಮಾರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದು, ದಕ್ಷಿಣ್‌ ಕುಮಾರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಯಶಾ ಇಂಟ್ರೊಡಕ್ಷನ್‌ ಗಾಗಿಯೇ ಮಾಡಿದ ಹಾಡು ಎಂಬುದು ವಿಶೇಷವಾದರೆ, ಇದನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಓದಿದ ಕುಮಟಾ ಬಳಿಯ ಶಾಲೆಯೊಂದರಲ್ಲಿ ಚಿತ್ರೀಕರಣ ನಡೆಸಿರುವುದು ಮತ್ತೂಂದು ವಿಶೇಷ.

ಮಳೆಯ ಭೋರ್ಗರೆತದ ನಡುವೆ ಕುಣಿವ ಯಶಾ, ರೆಟ್ರೋ ಸ್ಟೆçಲ್‌ನಲ್ಲಿ ಕಂಗೊಳಿಸಿದ್ದಾರೆ. ಎ.ಆರ್‌.ವಿಖ್ಯಾತ್‌ “ಮಾನ್ಸೂನ್‌ ರಾಗ’ಕ್ಕೆ ವಿಖ್ಯಾತ್‌ ಚಿತ್ರ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಎಸ್‌. ರವೀಂದ್ರನಾಥ್‌ ನಿರ್ದೇಶನವಿದೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next