Advertisement

ಧಮ್ಕಿ ಮೂಲಕ ವಿಶ್ವಕ್‌ ಸೇನ್‌ ಕನ್ನಡಕ್ಕೆ ಎಂಟ್ರಿ

01:04 PM Sep 07, 2022 | Team Udayavani |

ತೆಲುಗು ಚಿತ್ರರಂಗದಲ್ಲಿ “ಫ‌ಲಕ್ನುಮಾದಾಸ್‌’ ಸಿನಿಮಾದ ಮೂಲಕ ನಟ ಕಂ ನಿರ್ದೇಶಕನಾಗಿ ತಮ್ಮದೇ ಆದ ಹೆಸರುಗಳಿಸಿರುವ ವಿಶ್ವಕ್‌ ಸೇನ್‌ ಈಗ ಕನ್ನಡ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ.

Advertisement

ಹೌದು, ವಿಶ್ವಕ್‌ ಸೇನ್‌ ಇದೀಗ “ಧಮ್ಕಿ’ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಲು ಸಜ್ಜಾಗಿದ್ದಾರೆ. “ಧಮ್ಕಿ’ ರೋಮ್ಯಾಂಟಿಕ್‌ ಕಾಮಿಡಿ, ಆಕ್ಷನ್‌ ಥ್ರಿಲ್ಲರ್‌ ಕಂಟೆಂಟ್‌ ಒಳಗೊಂಡಿದ್ದು, ಸಂಪೂರ್ಣ ಮನರಂಜನೆ ಜೊತೆಗೆ ಪಕ್ಕ ಆಕ್ಷನ್‌ ಸಿನಿಮಾವಾಗಿದ್ದು, ಕನ್ನಡದಲ್ಲೂ ತೆರೆ ಕಾಣಲಿದೆ.

ಈಗಾಗಲೇ ಶೇಕಡ 95ರಷ್ಟು ಶೂಟಿಂಗ್‌ ಮುಗಿಸಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು, ಈ ವಾರದಲ್ಲಿ ಮುಗಿಸಲು ಯೋಜನೆ ಹಾಕಿಕೊಂಡಿದೆ.

ಹೈದರಾಬಾದ್‌ “ಸಾರಥಿ ಸ್ಟುಡಿಯೋ’ದಲ್ಲಿ ಚಿತ್ರದ ಕ್ಲೆçಮ್ಯಾಕ್ಸ್‌ ಶೂಟಿಂಗ್‌ ನಡೆಸಲು ಅದ್ಧೂರಿ ಸೆಟ್‌ ಹಾಕಲಾಗಿದೆ. “ಧಮ್ಕಿ’ ಚಿತ್ರದಲ್ಲಿ ವಿಶ್ವಕ್‌ ಸೇನ್‌ಗೆ ಜೋಡಿಯಾಗಿ ನಿವೇತಾ ಪೇತುರಾಜ್‌ ನಟಿಸುತ್ತಿದ್ದಾರೆ.

ರಾವ್‌ ರಮೇಶ್‌, ಹೈಪರ್‌ ಆದಿ, ರೋಹಿಣಿ ಮತ್ತು ಪೃಥ್ವಿರಾಜ್‌ ಸೇರಿದಂತೆ ಪ್ರಮುಖರು ಚಿತ್ರದಲ್ಲಿ ಅಭಿನಯಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next