Advertisement

ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ: ಡಿಜಿಸಿಎ

01:10 AM Jun 09, 2022 | Team Udayavani |

ಹೊಸದಿಲ್ಲಿ: ಕೊರೊನಾ ಕಡಿಮೆಯಾಯಿತೆಂದು ಮಾಸ್ಕ್ ಇಲ್ಲದೆಯೇ ವಿಮಾನ ಪ್ರಯಾಣ ಮಾಡುವ ಪ್ರಯಾಣಿ ಕರಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದೆ. ಇನ್ನು ಮುಂದೆ ದೇಶದ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬುಧವಾರ ಸೂಚನೆ ಹೊರಡಿಸಲಾಗಿದೆ.

Advertisement

ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸ ಬಹುದು, ಮಾಸ್ಕ್ ಧರಿಸಲು ಹಠ ಮಾಡುವ ಪ್ರಯಾಣಿಕರ ಧೋರಣೆ ಯನ್ನು ಅಶಿಸ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬಹುದು ಎಂದು ಸೂಚನೆ ಯಲ್ಲಿ ಹೇಳಲಾಗಿದೆ.

ವಿಮಾನ ಪ್ರಯಾಣಿಕರು ಮತ್ತು ಸಿಬಂದಿಗೆ ಕಠಿನ ನಿಯಮಗಳನ್ನು ಡಿಜಿಸಿಎ ಜಾರಿ ಮಾಡಬೇಕು ಎಂದು ದಿಲ್ಲಿ ಹೈಕೋರ್ಟ್‌ ಜೂ. 3ರಂದು ಆದೇಶಿಸಿದ ಬೆನ್ನಲ್ಲೇ ಈ ನಿಯಮಗಳನ್ನು ಹೇರಲಾಗಿದೆ. ಜನರಿಗೆ ಈ ಬಗ್ಗೆ ಅರಿವು ಮೂಡಿಸುವುದಕ್ಕೆಂದು ಪ್ರಕಟನೆ, ಕಣ್ಗಾವಲನ್ನು ಹೆಚ್ಚಿ ಸಲು ಎಲ್ಲ ಏರ್‌ಲೈನ್‌ಗಳಿಗೆ ಸೂಚಿಸಲಾಗಿದೆ.

ದಂಡ ವಿಧಿಸಲು ಅವಕಾಶ: ಸ್ಥಳೀಯ ಪೊಲೀಸರು ಮತ್ತು ರಕ್ಷಣ ಪಡೆಗಳ ಸಹಾಯದೊಂದಿಗೆ ನಿಯಮ ಉಲ್ಲಂ  ಸಿ ದವರಿಗೆ ದಂಡ ವಿಧಿಸಬಹುದು ಅಥವಾ ಅವರನ್ನು ಹೆಚ್ಚಿನ ಕ್ರಮಕ್ಕಾಗಿ ರಕ್ಷಣ ಪಡೆಗೆ ಒಪ್ಪಿಸ ಬಹುದು ಎಂದೂ ನಿರ್ದೇಶನಾಲಯ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next