ಪ್ರಾಮಾಣಿಕತೆ ಮುಖ್ಯವೇ ಹೊರತು ಆಡಂಬರವಲ್ಲ. ದೇವರ ಮೇಲಿನ ನಂಬಿಕೆಯಿಂದಲೇ ಧಾರ್ಮಿಕ ಕ್ಷೇತ್ರಗಳ ಪಾವಿತ್ರÂ ಹೆಚ್ಚುತ್ತದೆ. ದೇವರ ಸನ್ನಿಧಿಯಲ್ಲಿ ಕಸ ಗುಡಿಸುವವರಿಂದ ಹಿಡಿದು ಧರ್ಮದರ್ಶಿಯವರೆಗಿನ ಎಲ್ಲರೂ ಒಂದೇ ಎಂಬ ಭಾವದಿಂದ ಇದ್ದರೆ ದೇವರ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
Advertisement
ಸೋಮವಾರ ಪೊಲಿಪು ಮಕ್ಕಳ ಶ್ರೀ ಮಹಾಲಕ್ಷ್ಮೀ ಭಜನ ಮಂದಿರದಸುವರ್ಣ ಮಹೋತ್ಸವ, ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಸುವರ್ಣ ಮಹೋತ್ಸವದ ಪ್ರಯುಕ್ತ ತಬರ ಮನೆ ವಸಂತಿ ಮೋನಪ್ಪ ಕೋಟ್ಯಾನ್, ನಕ್ರಮನೆ ಪಾಂಡು ಸುವರ್ಣ, ಚಂದು ಕರ್ಕೇರ ಮನೆ ಅಂಗರಿ ಕರ್ಕೇರ, ಚಂದ್ರಿಕಾ ಗಂಗಾಧರ ಸಾಲ್ಯಾನ್, ರಾಷ್ಟ್ರ ಮಟ್ಟದ ದೇಹಾದಾಡ್ಯì ಪಟು ಸ್ವರೂಪ್ ಎಂ. ಬಂಗೇರ ಸಹಿತ ವಿವಿಧ ಸಾಧಕರು ಮತ್ತು ದಾನಿಗಳನ್ನು ಸಮ್ಮಾನಿಸಲಾಯಿತು.
Advertisement
ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಅಧ್ಯಕ್ಷ ತಾರಾನಾಥ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ವಾಮನ ಮೆಂಡನ್ ವರದಿ ವಾಚಿಸಿದರು. ನೇತಾಜಿ ಕರ್ಕೇರ ಸಮ್ಮಾನಿತರನ್ನು ಪರಿಚಯಿಸಿದರು. ಮನೋಹರ ಮೆಂಡನ್ ಪ್ರತಿಭಾ ಪುರಸ್ಕಾರ ವಿಜೇತರ ಪಟ್ಟಿ ವಾಚಿಸಿದರು. ಮುಂಬಯಿ ಬಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಟಿ.ಜೆ. ಮೆಂಡನ್ ವಂದಿಸಿದರು. ದಿನೇಶ್ ಸುವರ್ಣ ನಿರ್ವಹಿಸಿದರು.